ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಶ್ರೀಮತಿ ಅಂಜಲಿ ನಿಂಬಾಳ್ಕರ್ ಶಾಸಕಿಯ ಅಭಿವೃದ್ಧಿ ಪರ ಯೋಜನೆಗಳ ಮಧ್ಯೆಯೂ ಈ ಚುನಾವಣೆ ಸುಲಭವಾಗಿ ಗೆಲುವು ನಿಶ್ಚಿತ ಎಂದು ಹೇಳಲಾಗದು ಕಾರಣ ಯಾವಾಗಲೂ ಚತುಷ್ಕೋನ ಸ್ಪರ್ಧೆಯು ಒಂದು ಕಡೆಯಾದರೆ ಮತ್ತೊಂದು ಭಾಷಾಭಿಮಾನ ಜನರ ಭಾವನೆಗಳನ್ನು ಕದಲಿಸುವ ಸಂಪ್ರದಾಯ ಈ ಕ್ಷೇತ್ರದಲ್ಲಿ ಸಹಜ ಮತ್ತು ಸಾಮಾನ್ಯ ಜನಾಭಿಪ್ರಾಯ ಶ್ರೀವಿಠ್ಠಲ ಸೋಮಣ್ಣಾ ಹಲಗೇಕರ ಕಡೆಗೆ ಹೆಚ್ಚು ಒಲವು ತೋರುತ್ತಿದ್ದು ಒಂದು ಅಂದಾಜಿನ ಪ್ರಕಾರ 55 ಗ್ರಾಮ ಪಂಚಾಯಿತಿಗಳು ಅವರು ಜೊತೆಗಿವೆ ಎಂಬ ಗುಮಾನಿ ಇದ್ದು ಎಷ್ಟರಮಟ್ಟಿಗೆ ಶಾಸಕಿ ನಿಂಬಾಳ್ಕರ್ ಅವರನ್ನು ಅಲ್ಲಗಳೆದು ಬೆಂಬಲ ವ್ಯಕ್ತವಾಗಿದೆ ಎಂಬುವುದು ಯಕ್ಷ ಪ್ರಶ್ನೆ ಕಾರಣ ಹಲಗೇಕರ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡು ಮತ್ತೆ ತಮ್ಮ ಸಾಮಾಜಿಕ,ಶೈಕ್ಷಣಿಕ,
ಆರ್ಥಿಕ,ರಾಜಕೀಯ ಚಟುವಟಿಕೆಗಳಿಗೆ ಚೇತನ ಒದಗಿಸುತ್ತಾ ನಿರಂತರ ಜನರ ಸಂಪರ್ಕದಲ್ಲಿ ಇದ್ದಾರೆ ಇನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಇತ್ತಿಚೆಗೆ ಭಾಜಪ ಸೇರಿಕೊಂಡಿರುವ ಶ್ರೀಅರವಿಂದ ಚಂದ್ರಶೇಖರ ಪಾಟೀಲ ಟಿಕೆಟ್ ಆಕಾಂಕ್ಷಿಯಾಗಿದ್ದು ಭಾರತೀಯ ಜನತಾ ಪಕ್ಷ ಯಾರಿಗೆ ಮಣೆ ಹಾಕುತ್ತದೆಯೋ ಎಂಬುವುದು ಕ್ಷೇತ್ರದಲ್ಲಿನ ಗೊಂದಲ ಇನ್ನೂ ಜಾತ್ಯತೀತ ಜನತಾದಳದ ಶ್ರೀನಾಸಿರ ಬಾಗವಾನ ಸಹ ಸ್ಪರ್ಧೆಗೆ ಇಳಿಯುವ ಸಾಧ್ಯತೆಯಿರುವುದರಿಂದ ಕ್ಷೇತ್ರದಲ್ಲಿ ಭಾಜಪ,ಕಾಂಗ್ರೆಸ್,
ಜೆಡಿಎಸ್,ಎಮ್.ಇ.ಎಸ್,ಚತುಷ್ಕೋನ ಸ್ಪರ್ಧೆಯಲ್ಲಿ ಹಲಗೇಕರ ಹವಾ ಕೆಲವು ಹಳ್ಳಿಗಳಲ್ಲಿ ಜನಾಭಿಪ್ರಾಯ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಹಾಲಿ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳ್ಕರ್ ಅವರಿಗೆ ಗೆಲುವು ಸುಲಭವಾಗಿಲ್ಲ ಎಂಬುದು ಸದ್ಯದ ಲೆಕ್ಕಾಚಾರ ಒಟ್ಟಾರೆಯಾಗಿ ತ್ರಿಕೋನ ಸ್ಪರ್ಧೆಯಂತೂ ಖಚಿತವಾಗಿದೆ ಯಾರಿಗೂ ಗೆಲುವು ಕ್ಷೇತ್ರದಲ್ಲಿ ಕಷ್ಟಸಾಧ್ಯ ಎಂಬಂತಾಗಿದೆ ಮೇಲ್ನೋಟಕ್ಕೆ ಕೆಲವು ಹಾಲಿ ಶಾಸಕಿಯ ಪರವಾಗಿದ್ದರು ಸಹ ಬಹಳಷ್ಟು ಅಭಿಮಾನ ಶ್ರೀವಿಠ್ಠಲ ಸೋಮಣ್ಣಾ ಹಲಗೇಕರ ಪರವಾಗಿಯೂ ಅಲೆ ಕೇಳಿಬರುತ್ತಿದೆ ಜನರ ತೀರ್ಪು ಏನೇ ಆದರೂ ಬೆಳಗಾವಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪೈಕಿ ಖಾನಾಪುರ ಕ್ಷೇತ್ರ ಚತುಷ್ಕೋನ ಆಗಿರುವುದು ವಿಶೇಷತೆಯಾಗಿದೆ.
ವರದಿ-ದಿನೇಶಕುಮಾರ ಅಜಮೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.