ಈ ಹೊತ್ತಿನವರೆಗೂ
ಇಲ್ಲದಿರುವುದರದೆ
ಚಿಂತೆಯಾಗಿತ್ತು
ಚಿಂತೆಯ ಕಂತೆಯಲಿ
ಬೆಂದ ಮೇಲೆಯೇ ತಿಳಿಯಿತು
ನನ್ನಬಳಿ ಇರುವುದರ ಮೌಲ್ಯ
ಚಿಂತೆಯ ಕಂತೆಯಲಿ ಚಿಂತನೆಯ ಮಾಡದೆ
ಚಿತೆಯನೆ ಎರಿದಂತಾಗಿತ್ತು
ಈವರೆಗಿನ ಕಾಲ
ಕಾಲ ಕಳೆದಂತೆ
ನಾನು ನನ್ನದೆನೆಂಬುದನು ಕಂಡೆ
ಕಾಲದ ಸುಳಿಯಿಂದ ತಪ್ಪಿಸಿಕೊಂಡೆ
ಇರುವುದನು ಬಿಟ್ಟು
ಇಲ್ಲದಿರುವುದನು ಪಡೆಯುವ ಮೋಹದಲಿ
ಸಿಲುಕದೆ ಚೆತರಿಸಿಕೊಂಡೆ
ಇಂದಿನಿಂದಲೇ ಆರಂಭವಾಗಿದೆ
ಇರುವುದರೊಂದಿಗಿನ ಜೀವನದ
ಹೋರಾಟ
ಹೋರಾಟದ ಹಾದಿಯಲಿ
ಜಯವನೇ ಪಡೆವೆ
ಯಾಕೆಂದರೆ ಅದು ನನ್ನದೆ ಆಗಿದೆ
ರಚನೆ:ಲೋಹಿತೇಶ್ವರಿ ಎಸ್.ಪಿ