ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಶಾಸಕ ವೆಂಕಟರಮಣಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.
ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ ಪಂಚಾಯತಿ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅಲ್ಲಿನ ಅಧಿಕಾರಿಗಳು ಸಾರ್ವಜನಿಕರಿಗೆ ಮತ್ತು ರೈತರಿಗೆ ಯಾವುದೇ ರೀತಿ ಕುಂದು ಕೊರತೆಗಳಿಲ್ಲದೆ ನೋಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ದಂಡಾಧಿಕಾರಿಗಳಾದ ವರದರಾಜು ಮಾತನಾಡುತ್ತಾ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ದೂರದ ಪಂಚಾಯತಿಗಳಲ್ಲಿ ನೆರವೇರಿಸುವ ಉದ್ದೇಶವೇನೆಂದರೆ ಆ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆ ಬಂದು ಅಧಿಕಾರಿಗಳು ಸಿಗದೇ ಹಳೆದಾಡಬಾರದೆಂದು ತಿಂಗಳ ಮೂರನೇ ವಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಮಂಜುಳಾ ರಾಜಣ್ಣ,ಉಪಾಧ್ಯಕ್ಷರಾದ ತಿಮ್ಮ ರಾಜಮ್ಮರಾಜಕುಮಾರ್, ಸದಸ್ಯರುಗಳಾದ ಚಂದ್ರಪ್ಪ, ಜಗನ್ನಾಥ್,ರವಿಕುಮಾರ್, ಸಂಜೀವಪ್ಪ,ಕಮಲಮ್ಮ, ಅನ್ನಪೂರ್ಣ,ಉಷಾ, ನಾಗಮಣಿ,ಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸಲು, ಎಸ್ ಡಿ ಎ ಮಂಜುನಾಥ್. ಜೆ ಇ ಬಸವಲಿಂಗಪ್ಪ ಸಿ ಡಿ ಪಿ ಒ ನಾರಾಯಣ್. ರಿಕ್ಯುಬ್ ಸಾಬ್ ಡಾಕ್ಟರ್ ಕಿರಣ್ ಸೇರಿದಂತೆ ತಾಲ್ಲೂಕು ಮಟ್ಟದ ಇಲಾಖೆ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.