ಯಾದಗಿರಿ:ಶಹಾಪುರ ನಗರದಲ್ಲಿ ಆಯೋಜಿಸಿದ್ದ
ಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರು ದೇವರ ಕೃಪಾ ಆಶೀರ್ವಾದದಿಂದ ನಡೆದ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ವತಿಯಿಂದ 5 ರಿಂದ 18 ವರ್ಷದ ಮಕ್ಕಳಿಗಾಗಿ ಯೋಗ ಶಿಬಿರ ಹಮ್ಮಿ ಕೊಳ್ಳಲಾಗಿತ್ತು ದಿನಾಂಕ 21/1/2023 ರಿಂದ 22/1/2023 ಪ್ರಜ್ಞಾ ಯೋಗ ಶಿಬಿರ ಕಾರ್ಯಕ್ರಮವು ನೆರವೇರಲಿದೆ.
ಈ ಕಾರ್ಯಕ್ರಮದಲ್ಲಿ ಮಕ್ಕಳು ವಿಶೇಷವಾದ ಪ್ರಜ್ಞೆಯ ಮೂಲಕ ಕಣ್ಣು ಮುಚ್ಚಿ ಓದುವುದು,ಬರೆಯುವುದು, ಚಿತ್ರಗಳನ್ನು ಬಿಡಿಸುವುದು, ಅಂಕಿಗಳನ್ನು ಹೇಳುವುದು, ಬಣ್ಣಗಳನ್ನು ಗುರುತಿಸುವುದು ಮತ್ತು ಮಕ್ಕಳ ಮನಸ್ಸಿನಲ್ಲಿ ಬರ್ತಕಂತ ಆಲೋಚನೆಗಳನ್ನು ವಿವರಿಸಿವುದು ಹೀಗೆ ಹಲವಾರು ತರಹದ ಪ್ರಕ್ರಿಯೆ ಯನ್ನು ಮಕ್ಕಳು ತಮ್ಮ ಪೋಷಕರ ಮುಂದೆ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರಸ್ತುತ ಪಡಿಸಿದರು.
ಮಕ್ಕಳು ಅತಿ ಉತ್ಸಾಹದಿಂದ ಮತ್ತು ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ದಿನ ನಮ್ಮ ಮನೆಯಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡುತ್ತಿವೆಂದು ಪ್ರತಿಜ್ಞೆಯನ್ನು ಮಾಡಿದರು.
ಈ ಕಾರ್ಯಕ್ರಮಕ್ಕೆ ಶಹಾಪುರ ನಗರದ ಜನತೆ ಹಾಗೂ ತಂದೆ ತಾಯಂದಿರು ಮತ್ತು ಗಣ್ಯರು ಕಾರ್ಯಕ್ರಮಕ್ಕೆ ಬಂದು ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಕೇಂದ್ರ ಬಿಂದು ಆದ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಆಶ್ರಮದ ಶಿಕ್ಷಕಿ ಸಾದ್ವಿ ವಾಣಿಶ್ರೀ ರಾವ್ ಯೋಗ ಶಿಬಿರವನ್ನು ನಡೆಸಿ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆಯ ಸಂಯೋಜಕರಾದ ಶ್ರೀ ಎಸ್ ಎಚ್ ರೆಡ್ಡಿ ಜಿ ಮತ್ತು ಸ್ವಯಂ ಸೇವಕರಾದ. ಮಾಧುರಿ, ಪಾರ್ವತಿ ಉಪ್ಪಿನ್, ಗಂಗಾ ತುಂಬಿಗಿ , ಪುಷ್ಪ ತುಂಬಿಗಿ, ಶಾರದಾ ಪಡಶೆಟ್ಟಿ, ಅನುರಾಧ, ಜಯಶ್ರೀ ಹಿರೇಮಠ, ಮೋಹನ್ ರೆಡ್ಡಿ ದಿಗ್ಗಾವಿ, ಭೀಮರಾಯ ಬಿರಾದಾರ್, ವಿದ್ಯಾಧರ್ ಆನೆಗುಂದಿ, ಸಂಗಮೇಶ್ ಖಾನಾಪುರ್, ಸಂಗಮೇಶ್ ಕುಂಬಾರ್, ಈ ಕಾರ್ಯಕ್ರಮಕ್ಕೆ ಗಣ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ