ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಾನಪದ ಉಳಿದರೆ ಹಳ್ಳಿಯ ಸಂಸ್ಕೃತಿಯು ಉಳಿದಂತೆ:ಡಾಕ್ಟರ್ ಬಾಲಾಜಿ

ಹನೂರು :ಪ್ರತಿ ಹಳ್ಳಿಯಲ್ಲಿ ಮೂಲ ಸಂಸ್ಕೃತಿಯು ಉಳಿಯಬೇಕಾದರೆ ಜಾನಪದ ಕಲೆಗಳು ಶಾಶ್ವತವಾಗಿ ಇರಬೇಕು ಹಾಗೆಯೇ ಜಾನಪದ ಸಾಹಿತ್ಯದಲ್ಲಿ ಜೀವನಕ್ಕೆ ತೆಗೆದುಕೊಳ್ಳಬಹುದಾದ ಪ್ರತಿ ಮೌಲ್ಯವು ಜೀವಂತವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ನ ರಾಜ್ಯ ಅಧ್ಯಕ್ಷರಾದ ಶ್ರೀಡಾಕ್ಟರ್ ಬಾಲಾಜಿ ತಿಳಿಸಿದರು .
ಹನೂರು
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲ್ಲೂಕು ಕನ್ನಡ ಜನಪದ ಪರಿಷತ್ ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ ನಮ್ಮ ಭಾಗದ ಜನರು ಹೆಚ್ಚಾಗಿ ಜಾನಪದ ಕಲೆಯನ್ನೆ ಮೈಗೂಡಿಸಿಕೊಂಡಿದ್ದಾರೆ ಇಂತಹ ಅವಕಾಶದಿಂದ ಪ್ರತಿಯೊಬ್ಬರನ್ನೂ ಗುರುತಿಸುವಂತಾಗಿದೆ ಎಂದರು ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾತನಾಡಿದ ಯುವ ನಾಯಕರಾದ ಡಾಕ್ಟರ್ ಪ್ರೀತನ್ ನಾವು ಹುಟ್ಟಿರುವ ಪ್ರದೇಶದಲ್ಲಿ ಜಾನಪದದ ಉಸಿರಿದೆ ಇಂತಹ ಕಾರ್ಯಕ್ರಮವನ್ನು ಪ್ರತಿ ಬಾರಿಯು ಹಮ್ಮಿಕೊಳ್ಳಿ ನನ್ನಿಂದ ಎಲ್ಲಾ ಸಹಕಾರ ನೀಡಲಾಗುವುದು
ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯವನ್ನು ಜನಪದ ಪರಿಷತ್ ಮಾಡಬೇಕು ಈ ಬಳಗವು ಗ್ರಾಮೀಣ ಪ್ರದೇಶದ ಮನೆ,ಮನೆಗೆ ಹೋಗಿ ಪ್ರತಿಭೆಗಳನ್ನು ಗುರುತಿಸಿ,ಹೊರತರುವ ಪ್ರಯತ್ನವನ್ನು ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ
ತಾಲ್ಲೂಕು ಜಾನಪದ ಪರಿಷತ್‌ನ ಅಧ್ಯಕ್ಷರಾದ ಸಿ.ಕೆ ಕೃಷ್ಣಕುಮಾರ್ ಮಾತನಾಡಿ ಜನಪದ ಕಲೆ ರಾಜ್ಯಾದ್ಯಂತ ಪ್ರಬುದ್ದವಾಗಿ ಬೆಳೆಯುತ್ತಿದೆ,ಅದರಲ್ಲೂ ನಮ್ಮ ಜಿಲ್ಲೆಯು ಜನಪದದ ತವರೂರು ಈ ಭಾಗದಲ್ಲಿ ನೆಲೆಸಿರುವ ಸಿದ್ದಪ್ಪಾಜಿ,ಮಂಟೇಸ್ವಾಮಿ,ಮಹದೇಶ್ವರ ಮೂಲ ಜಾನಪದಗಾರರು,ಹಾಗಾಗಿ ನಮ್ಮ ತಾಲ್ಲೂಕಿನಲ್ಲಿ ಜಾನಪದ ಕಲೆ ಬೆಳೆಸುವ ಮೂಲಕ ರಾಜ್ಯದ ಎಲ್ಲೆಡೆ ಜಾನಪದ ಪರಿಷತ್ತು ಪಸರಿಸುವಂತಾಗಬೇಕು ಎಂದರು
ಇದೇ ಸಂದರ್ಭದಲ್ಲಿ ಹನೂರು ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣವನ್ನು ಮಾಡಲಾಯಿತು
ಕನ್ನಡ ಜನಪದ ಪರಿಷತ್ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ಸಿ.ಕೆ.ಕೃಷ್ಣಕುಮಾರ್, ಕಾರ್ಯದರ್ಶಿಯಾಗಿ ಮಹೇಶ್ ಎಂ,ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ,ಜಂಟಿ ಕಾರ್ಯದರ್ಶಿಯಾಗಿ ಒಡೆಯರಪಾಳ್ಯದ ಸೋಮಶೇಖರ್,ಖಜಾಂಜಿಯಾಗಿ ಶ್ರೀನಿವಾಸ್, ಸಂಚಾಲಕರಾಗಿ ಬಸವರಾಜ್,ಪತ್ರಿಕಾ ಕಾರ್ಯದರ್ಶಿಯಾಗಿ ಪೊನ್ನಾಚಿ ಬಂಗಾರಪ್ಪ ಸಿ, ಸದಸ್ಯರುಗಳಾಗಿ ಜಯಂತ್ ಕುಮಾರ್, ಭರತ್‌ಕುಮಾರ್, ಅನಿಲ್‌ಕುಮಾರ್, ಶಿವು ಪದಗ್ರಹಣ ಮಾಡಿದರು.

ಇದೇ ಸಂದರ್ಭದಲ್ಲಿ ಬಂಡಳ್ಳಿ ಮಠದ ಫಲಹಾರ ಪ್ರಭುದೇವಸ್ವಾಮಿಜಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗುರುಸ್ವಾಮಿ,ಜಿಲ್ಲಾಧ್ಯಕ್ಷರಾದ ಸುರೇಶ್ ನಾಗ್,ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ರಾಚಪ್ಪ, ಕಲಾವಿದ ಹಾಗೂ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷರಾದ ರಾಮದಾಸ್, ಸಾಹಿತಿ ಗುರುಸ್ವಾಮಿ ಶಿಕ್ಷಕರಾದ ಜಡೆಸ್ವಾಮಿ ಸೇರಿದಂತೆ ಇನ್ನೀತರರು ಹಾಜರಿದ್ದರು .
ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ