ಯಾದಗಿರಿ:ಇಂದು ಸರಕಾರಿ ಬಾಲಕರ ಪ್ರೌಢಶಾಲೆ ಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬವು ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿಯಾದ ಶ್ರೀಮತಿ ರೇಣುಕಾ ಪಾಟೀಲ್ ಅವರು ಕರೋನಾ ನಂತರದಲ್ಲಿ ಮಕ್ಕಳಲ್ಲಿ ಉಂಟಾದ ಕಲಿಕಾ ಹಬ್ಬ ರಾಜ್ಯದ ಎಲ್ಲಾ ಸರಕಾರಿ
ಶಾಲೆಗಳಲ್ಲಿ ೪೧೦೩ ಕ್ಲಸ್ಟಗಳಲ್ಲಿ ನಡೆಯುತ್ತಿದೆ ಎಂದು ಕಾರ್ಯಕ್ರಮದ ಅತಿಥಿಗಳು ರೇಣುಕಾ ಪಾಟೀಲ್ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲನಗೌಡ ಬಿರಾದಾರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಬಿ.ಎಹ್.ಸೂರ್ಯವಂಶಿ,ವೆಂಕೊಬಾ ಪಾಟೀಲ್, ಶರಣಪ್ಪ ಪಾಟೀಲ್,
ಈರಯ್ಯ ಹಿರೇಮಠ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸೌಭಾಗ್ಯ ಹಾಗೂ ಲಕ್ಷ್ಮಣ್ ಲಾಳಸಿರಿ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೀರಭದ್ರಯ್ಯ ಸಿ.ಆರ್.ಪಿ ಮಾತನಾಡಿದ ಕಲಿಕಾ ಹಬ್ಬ ಉದ್ದೇಶ ಅದು ಒಳಗೊಂಡಿರುವ ಚಟುವಟಿಕೆಗಳು ಹಾಗೂ ಶಾಲೆಗಳಲ್ಲಿ ಕಲಿಕಾ ಹಬ್ಬದ ಅನುಷ್ಠಾನ ಕುರಿತು ವಿವರಿಸಿದರು.
ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಅಶ್ವಿನಿ ಜೋಶಿ ಹಾಗೂ ಗುರುಬಸವ ಕಾರ್ಯಕ್ರಮದ ನಿರೂಪಣೆ
ಮಾಡಿದರು ಶ್ರೀಮತಿ ಪ್ರಭಾವತಿಯವರು ಹಾಗೂ ರುದ್ರಪ್ಪ ಅವರು ಸ್ವಾಗತಿಸಿದರು.
ಶ್ರೀಮತಿ ಲಕ್ಷ್ಮೀಬಾಯಿ ಅವರು ವಂದನಾರ್ಪಣೆ ಮಾಡಿದರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ