ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿ ಕೊಪ್ಪ ಗ್ರಾಮದಲ್ಲಿ ಇರುವ ಸರಕಾರಿ ಯುನಾನಿ ಚಿಕಿತ್ಸಾಲಯಕ್ಕೆ ಇಂದು ಉಪ ನಿರ್ದೇಶಕರು ಆಯುಷ್ ನಿರ್ದೇಶನಾಲಯ ಬೆಂಗಳೂರು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಆಯುಷ್ ಇಲಾಖೆ ಹಾವೇರಿ ಇವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಮೈನುದ್ದೀನ್ ಲೋಹಾರ್ ಇವರ ಕಾರ್ಯಗಳನ್ನು ಪರಿಶೀಲಿಸಿದರು ಮತ್ತು ಅವರ ಸೇವೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಯೋಗಾ ಸಿಬ್ಬಂದಿಗಳ ಕಾರ್ಯವನ್ನು ಪರಿಶೀಲಿಸಿದರು ಮತ್ತು ಆಸ್ಪತ್ರೆಯ ಸುತ್ತಮುತ್ತ ವಿವಿಧ ಔಷಧಿ ಗಿಡಗಳನ್ನು ಪರಿಶೀಲಿಸಿ ಅವುಗಳ ಉಪಚಾರವನ್ನು ಕುರಿತು ವಿವರಿಸಿದರು ಆಸ್ಪತ್ರೆ ವೇಳೆಯಲ್ಲಿ ರೋಗಿಗಳು ಇದ್ದರು ಅವರಿಗೆ ಆಸ್ಪತ್ರೆಯ ಸೇವೆಯ ಬಗ್ಗೆ ವಿಚಾರಿಸಿದರು ರೋಗಿಗಳಿಂದ ಒಳ್ಳೆಯ ಅಭಿಪ್ರಾಯಗಳು ಬಂದಿರುವುದರಿಂದ ಅಧಿಕಾರಿಗಳು ಸಂತೋಷ ವ್ಯಕ್ತಪಡಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ