ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸೂಲಂಗಿ ಕುಟುಂಬದ ಹಿರಿಯರಾದ ನಗರಸಭೆಯ ನಿವೃತ್ತ ಪೌರ ಕಾರ್ಮಿಕರಾದ ದಿ. ಯಮನಪ್ಪ ಸೂಲಂಗಿ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಮತ್ತು ಅನ್ನ ಸಂತರ್ಪಣೆ “ಕರುಣೆಯ ಮಡಿಲು” ಎನ್ನುವ ವಿಶೇಷ ಕಾರ್ಯಕ್ರಮದೊಂದಿಗೆ ನೆರವೇರಿತು.ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಚ್.ಸೂಲಂಗಿ ನಮ್ಮ ತಂದೆಯವರು ಪೌರಕಾರ್ಮಿಕರಾಗಿ ಹಗಲಿರುಳೆನ್ನದೆ ನಗರಸಭೆಯ ಕಾರ್ಯ ವೈಖರಿ ಚಿರಪರಿಚಿತವಾಗಿದೆ ನಾನು ಹುಟ್ಟಿದ ನಾಲ್ಕು ವರ್ಷಗಳಲ್ಲಿ ನನ್ನ ತಾಯಿ ಇಹಲೋಕ ತ್ಯಜಿಸಿದ್ದಳು ತಾಯಿ ಇಲ್ಲ ಎನ್ನುವ ಕೊರಗನ್ನು ನಿಭಾಯಿಸಿದ ನನ್ನ ತಂದೆ ನನ್ನ ಏಳಿಗೆಗೆ ನನ್ನ ನಿಜವಾದ ಭಾವನೆಗಳ ಭಾವೈಕ್ಯ ಮಂದಿರಕ್ಕೆ ಇವರೇ ದೇವರು ಎಂದು ಭಾವಕರಾಗಿ ಮಾತನಾಡಿದರು ನಂತರ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಾಜಿ ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಕರಿಯಪ್ಪನವರು ಮಾತನಾಡಿ ನಮ್ಮ ಜನ್ಮದಾತರುಗಳಾದ ತಂದೆ ತಾಯಿಗಳೆ ನಿಜವಾದ ದೇವರು ಇವರನ್ನು ಪ್ರತಿಕ್ಷಣ ಪ್ರತಿದಿನ ನೆನೆದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ.ನಮ್ಮ ದಿ.ಯಮನಪ್ಪ ಸೂಲಂಗಿಯವರು ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವಾಗ ಪ್ರತಿದಿನ ಸಿಂಧನೂರಿನ ಮೂಲೆ ಮೂಲೆಯಲ್ಲಿ ಸ್ವಚ್ಛಗೊಳಿಸುವುದರ ಮೂಲಕ ಅದೆಷ್ಟೋ ಜನರ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿ ಸಿಂಧನೂರಿನಲ್ಲಿ ಮನೆ ಮನೆ ಮಾತಾಗಿದ್ದರು ಹಾಗೂ ಸಿಂಧನೂರು ನಗರದ ನಮ್ಮ ಕಾರುಣ್ಯ ಆಶ್ರಮ ಅದೆಷ್ಟೋ ಹಿರಿಯ ತಂದೆ ತಾಯಿಗಳಿಗೆ ಆಶ್ರಯ ನೀಡಿ ಲಾಲನೆ ಪೋಷಣೆ ಮಾಡುವುದರ ಜೊತೆ ನಮ್ಮೆಲ್ಲರ ಮಾರ್ಗದರ್ಶನದ ಮೂಲಕ ಇದು ಸೇವೆಯಲ್ಲ ನಮ್ಮ ಆದ್ಯ ಕರ್ತವ್ಯ ಎಂದು ಕಾರ್ಯನಿರ್ವಹಿಸುತ್ತಿರುವ ಸುಜಾತ ಡಾ.ಚನ್ನಬಸವಸ್ವಾಮಿ ದಂಪತಿಗಳ ಸೇವೆ ಶ್ಲಾಘನೀಯ ನಮ್ಮ ಸೂಲಂಗಿಯವರ ಕುಟುಂಬ ಇಂದಿನ ವಿಶೇಷ ಕಾರ್ಯಕ್ರಮ ಮಾಡುವುದರ ಮೂಲಕ ತಂದೆ ತಾಯಿಗಳನ್ನು ನೆನಪಿಸಿಕೊಳ್ಳುವ ಕಾರ್ಯ ಸಮಾಜಕ್ಕೆ ಒಂದು ವಿಶೇಷ ಅರ್ಥ ಕಲ್ಪಿಸಿ ಕೊಡುವಂತ ಅದ್ಭುತ ಕಾರ್ಯಕ್ರಮ ಹಮ್ಮಿಕೊಂಡಿದೆ. ದಿ.ಯಮನಪ್ಪ ಸೂಲಂಗಿಯವರ ಆತ್ಮಕ್ಕೆ ಆ ಭಗವಂತ ನಿರಂತರ ಶಾಂತಿಯನ್ನು ಕರುಣಿಸಿ ಅವರ ಕುಟುಂಬಕ್ಕೆ ದಿವಂಗತರ ಅಗಲಿಕೆ ನೋವು ಭರಿಸುವಂತಹ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ನಾವು ನೀವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಮಾತನಾಡಿ ದಿವಂಗತರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು ನಂತರ ಮಾತನಾಡಿದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ತಾಲೂಕ ಅಧ್ಯಕ್ಷರಾದ ಆರ್.ಅಂಬ್ರೂಸ್ ಇಂದು ಸೂಲಂಗಿಯವರು ತಮ್ಮ ಕುಟುಂಬದ ಯಜಮಾನನ ಪುಣ್ಯಸ್ಮರಣೆಯನ್ನು ಕಾರುಣ್ಯದಂತಹ ಪವಿತ್ರ ಸ್ಥಳದಲ್ಲಿ ನೆರವೇರಿಸಿರುವುದು ನಮಗೆ ಕಣ್ಣು ತೆರೆಸಿದಂತಾಗಿದೆ ಇನ್ನೂ ಮುಂದೆ ನಾವು ಕೂಡ ಹಿರಿಯರ ಮತ್ತು ಮನೆಯ ಎಲ್ಲಾ ಕಾರ್ಯಕ್ರಮಗಳು ಇಂತಹ ಸ್ಥಳದಲ್ಲಿ ಆಚರಿಸುತ್ತೇವೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ.ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಮೇಲ್ವಿಚಾರಕರಾದ ಸುಜಾತ ಹಿರೇಮಠ. ಪತ್ರಕರ್ತರಾದ ನಾಗರಾಜ ಬೊಮ್ಮನಾಳ.ಎಂ. ಆರ್. ಎಚ್.ಎಸ್. ತಾಲೂಕಾಧ್ಯಕ್ಷರು ಹಾಗೂ ಕೆ.ಕರಿಯಪ್ಪ ಅಭಿಮಾನ ಗೌರವಾಧ್ಯಕ್ಷರಾದ ಎಚ್.ಸೂಲಂಗಿ. ಸೂಲಂಗಿ ಕುಟುಂಬದ ಸದಸ್ಯರುಗಳಾದ ಪರಸಪ್ಪ ಸೂಲಂಗಿ. ಹನುಮಂತಪ್ಪ ಸೂಲಂಗಿ. ಹುಸೇನಪ್ಪ ಸೂಲಂಗಿ. ನಾಗರಾಜ ಬುಕ್ಕನಟ್ಟಿ. ನಾಗರಾಜ ಸೂಲಂಗಿ. ಸೂರ್ಯ. ಹುಸೇನಮ್ಮ ಸೂಲಂಗಿ. ಅನ್ನಪೂರ್ಣ ಎಚ್. ಸೂಲಂಗಿ. ಮೌನಮ್ಮ ಹನುಮಂತಿ ಗಂಗಮ್ಮ ದ್ಯಾವಣ್ಣ ನಿರುಪಾದಿ ಮತ್ತು ಸೂಲಂಗಿ ಕುಟುಂಬದ ಅಪಾರ ಕುಟುಂಬ ವರ್ಗ ಭಾಗವಹಿಸಿದ್ದರು.
-ಕರುನಾಡ ಕಂದ