ದಾವಣಗೆರೆ:- ಜ.24. ಕನ್ನಡ ಸಾಹಿತ್ಯ ಪರಿಷತ್ತಿನ
೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು
ಇತ್ತೀಚಿಗೆ ಹಾವೇರಿಯಲ್ಲಿ ಅತ್ಯದ್ಭುತವಾಗಿ ಕಿಕ್ಕಿರಿದ ಜನಸಾಗರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಆದರೆ ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ ಅಪ್ಪಟ ಕನ್ನಡ ಭಾಷೆಯ ಸಾವಿರಾರು ವರ್ಷಗಳ ಪುರಾತನ ಇತಿಹಾಸವಿರುವ ಜನಪದ ಆರಾಧನಾ ಕಲೆ ಯಕ್ಷಗಾನಕ್ಕೆ ಅವಕಾಶ ಕಲ್ಪಿಸದೆ ಇರುವುದು ವಿಷಾದದ ಸಂಗತಿಈಗಾಗಲೇ ಸರ್ಕಾರಕ್ಕೆ ಕನ್ನಡ ಸಂಸ್ಕೃತಿ ಇಲಾಖೆಗೆ, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಿಗೆ ಸಾಕಷ್ಟು ಬಾರಿ ಮನವಿ ಕೊಟ್ಟಾಗಿದೆ. ಮಂಡ್ಯದಲ್ಲಿ ಮುಂದಿನ ಸಾರಿ ನಡೆಯಲಿರುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗಾನವಾದ ಯಕ್ಷಗಾನ ದೈವೀಕಲೆಗೆ ಅವಕಾಶ ಕಲ್ಪಿಸುವ ಜತೆಗೆ ನಾಡಿನ ಎಲ್ಲಾ ಜಿಲ್ಲೆ, ತಾಲ್ಲೂಕು ಸಮ್ಮೇಳನಗಳಲ್ಲೂ ಈ ದೈವೀಕಲೆಗೆ ಅದ್ಯತೆ ಮಾನ್ಯತೆ ನೀಡಬೇಕಾಗಿ ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರು, ಯಕ್ಷಗಾನ ಹವ್ಯಾಸಿ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ವರದಿ: ಬಿ. ಎಸ್. ಬಾಗೇವಾಡಿಮಠ.