ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬುಧವಾರ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶ್ರೀ ಭೀಮಸೇನ ಭಟ್ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಭೀಮಸೇನಭಟ್ ಅವರು ಶಾಲೆಗೆ ಸುಭಾಷ್ ಚಂದ್ರ ಬೋಸ್,ಕಿತ್ತೂರು ರಾಣಿ ಚೆನ್ನಮ್ಮ,ಭಗತ್ ಸಿಂಗ್,ಸರ್ದಾರ್ ವಲ್ಲಭಭಾಯಿ ಪಟೇಲ್ ಮಹಾತ್ಮರಂತರ 10 ಭಾವಚಿತ್ರಗಳನ್ನು ಕಾಣಿಕೆಯಾಗಿ ನೀಡಿದರು.
ನಂತರ ಮಾತನಾಡಿ ನಾನು 1991ರಿಂದ1995 ರಲ್ಲಿ ಇದೇ ಊರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದೇನೆ ಆಗ ನನಗೆ ನೀವುಗಳೆಲ್ಲರೂ ತುಂಬಾ ಸಹಾಯ ಸಹಕಾರ ನೀಡಿದ್ದೀರಿ,ನಾನು ಶಿಕ್ಷಕನಾಗಿ ಸೇವೆ ಸಲ್ಲಿಸುವಾಗ ಎರಡೇ ಕೊಠಡಿಗಳು ಇದ್ದವು ಅಷ್ಟರಲ್ಲಿ ನಾವು 1ರಿಂದ5ನೇ ತರಗತಿಯವರೆಗೆ ಕಲಿಸಬೇಕಾಗಿತ್ತು. ಸದ್ಯ ಇದೀಗ ನಾನು ನಿವೃತ್ತಿ ಹೊಂದಿದ್ದು ಗಂಗಾವತಿ ನಗರದಲ್ಲಿ ವಾಸವಾಗಿದ್ದೇನೆ.ಇಲ್ಲಿಗೆ ನಿಮ್ಮನ್ನೆಲ್ಲ ನೋಡಲು ಬಂದಿದ್ದೇನೆ ಇಂದು ನಾನು ಕಲಿಸಿದ ವಿದ್ಯಾರ್ಥಿಗಳಿಂದ ನನಗೆ ಸನ್ಮಾನಿಸಿರುವುದು ತುಂಬಾ ಸಂತೋಷವಾಗುತ್ತಿದೆ.ನಾನು ಕಲಿಸುವಾಗ ಹೆಚ್ಚು ಕೊಠಡಿಗಳು ಇರಲಿಲ್ಲ,ಕೇವಲ2ಕೊಠಡಿಗಳಲ್ಲೆ ಎಲ್ಲರನ್ನೂ ಕೂರಿಸಿಕೊಂಡು ಕಲಿಸಬೇಕಾಗಿತ್ತು ಮತ್ತು 3ಜನ ಶಿಕ್ಷಕರು ಮಾತ್ರ ಕಲಿಸುತ್ತಿದ್ದೆವು ಆದರೆ ಇಂದು ಈ ಶಾಲೆ ನೋಡಿ ತುಂಬಾ ಸಂತಸವಾಗುತ್ತಿದೆ.ಸುಸಜ್ಜಿತವಾದ ಕೊಠಡಿಗಳು,ವಿಶಾಲವಾದ ಮೈದಾನ,ಸುತ್ತಲೂ ಗಿಡಮರಗಳು, ಶಾಲೆಯ ಗೋಡೆಬರಹಗಳು, ಶಾಲೆಯ ಮುಂದೆ ಮತ್ತು ಹಿಂದುಗಡೆ ಹೂವಿನ ಹಾಗೂ ಹಣ್ಣಿನ ಗಿಡಗಳನ್ನು ನೋಡಿ ತುಂಬಾ ಸಂತೋಷವಾಯಿತು ಈ ರೀತಿಯಾಗಿ ಬೆಳೆಸಬೇಕಾದರೆ ಹಳೆಯ ವಿದ್ಯಾರ್ಥಿಗಳ ಆಸಕ್ತಿ ಮತ್ತು ಪರಿಶ್ರಮ ಎಷ್ಟು ಎಂಬುದು ತಿಳಿಯುತ್ತದೆ.ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿ ಎಂದು ಆಶಿಸುತ್ತೇನೆ.ಮತ್ತು ನನಗೆ ಸನ್ಮಾನಿಸಿ ಗೌರವಿಸಿದ ಎಲ್ಲ ನನ್ನ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ದನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಹನುಮಂತಗೌಡ ಸರ್, ಶರಣಯ್ಯಸ್ವಾಮಿ,ಬಸವರಾಜಪ್ಪ ಕಾರ್ಲಕುಂಟಿ,ಯಂಕರಡ್ಡೆಪ್ಪ ಹಳೆಮನಿ,ಕಾಂತೆಪ್ಪ ಗೌಡ, ಭೀಮನಗೌಡ ಪೋಲಿಸ ಪಾಟಿಲ್, ಶಾಲೆಯ ಶಿಕ್ಷಕರಾದ ಕಲ್ಲನಗೌಡ ಸರ್, ದೊಡ್ಡಪ್ಪ ಸರ್,ಛತ್ರಪ್ಪ ಸರ್, ಹುಸೇನ್ ಸಾಬ್ ಸರ್, ಅನಿಲಕುಮಾರ,ದುರಗೇಶ,ಸುಷ್ಮಾ ಟೀಚರ್,ಶರಣಬಸವ ಇನ್ನಿತರರು ಉಪಸ್ಥಿತರಿದ್ದರು.