ವೇಣೂರು, ಬೆಳ್ತಂಗಡಿ ತಾಲೂಕು , ಫೆಬ್ರವರಿ ೨೭ : ಇಲ್ಲಿನ ಗುಂದೂರಿ ಗ್ರಾಮದಲ್ಲಿ ಐದು ಕಿಲೋ ವಾಟ್ ಹೈ ಟೆನ್ಶನ್ ತಂತಿ ಹಾದು ಹೋಗುತ್ತಿದ್ದು ಕಳೆದ ಐದು ವರ್ಷಗಳಿಂದ ಟ್ರಾನ್ಸ್ ಫಾರ್ಮರ್ ಇರುವ ಸ್ಥಳದಲ್ಲಿ ಹಲವಾರು ಬಾರಿ ಸ್ಪಾರ್ಕ್ ಆಗಿ ಆಸುಪಾಸು ಇರುವ ತೆಂಗಿನ ತೋಟಕ್ಕೆ ಬೆಂಕಿ ಬಿದ್ದು ಹಲವಾರು ತೆಂಗಿನ ಮರಗಳು, ಅಡಿಕೆ ಮರಗಳು ಮತ್ತು ರಬ್ಬರ್ ಮರಗಳು ಸುಟ್ಟು, ತೋಟದ ಮಾಲೀಕರಾದ ಶ್ರೀ ಹರೀಶ್ ಭಟ್ ಮತ್ತು ಇತರರ ತೋಟ ಸುಟ್ಟು ಹೋಗಿದೆ.ಈ ಬಗ್ಗೆ ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ಮೆಸ್ಕಾಂಗೆ ದೂರು ನೀಡಿದರೂ ಯಾವುದೇ ರಿಪೇರಿ ಕೆಲಸ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಕ್ಷೇತ್ರದ ಶಾಸಕರು ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.