ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

‌ಆಜಾದಿ ಕಾ ಅಮೃತ ಮಹೋತ್ಸವ

ಯಾದಗಿರಿ: ಜಿಲ್ಲಾ ಆಡಳಿತ ಯಾದಗಿರಿ ಜಿಲ್ಲೆ ಮತ್ತು ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ಸಹಯೋಗದಲ್ಲಿ ಭಾರತದ ಸ್ವಾಸ್ಥ್ಯಕ್ಕಾಗಿ ಮನೆ ಮನೆಗೂ ಧ್ಯಾನ ( HAR GHAR DHYAN) ಕಾರ್ಯಕ್ರಮವು ಯಶಸ್ವಿಯಾಗಿ ದಿನಾಂಕ 24 ಫೆಬ್ರವರಿ -2023 ಶುಕ್ರವಾರ ರಂದು ಯಾದಗಿರಿ ಜಿಲ್ಲಾ ಸಭಾಂಗಣದಲ್ಲಿ ನೆರವೇರಿತು.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ||ವೇದಮೂರ್ತಿ ಜಿ ಅವರು ಮಾತನಾಡಿ ಮನಸ್ಸಿಗೆ ಶಾಂತಿ ತುಂಬಾ ಅತ್ಯವಶ್ಯಕ‌ ಹಾಗೂ ಸಾಮಾಜಿಕ ಸಾಮರಸ್ಯ ಕಾಪಾಡಲು ಯೋಗ ಮತ್ತು ಧ್ಯಾನ ನಮ್ಮ ಜೀವನದ ಪ್ರಮುಖ ಅಂಗವಾಗಬೇಕೆಂದು. ಮತ್ತು ಪ್ರತಿನಿತ್ಯ ತಾವು ಕೂಡ ಮನೆಯಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದರು.
ಯಾದಗಿರಿ ಜಿಲ್ಲಾಧಿಕಾರಿಗಳಾದ
ಶ್ರೀಮತಿ ಸ್ನೇಹಲ್ ಜಿ ಅವರು ಮಾತನಾಡಿ ವೈಯಕ್ತಿಕ ಬದುಕಿನಲ್ಲಿ ಮತ್ತು ಕೆಲಸದ ಒತ್ತಡದಲ್ಲಿ ಮುಳುಗಿರುವ ಇಂದಿನ ಪರಿಸ್ಥಿತಿಯಲ್ಲಿ ಕೆಲಸದಲ್ಲಿ ಮತ್ತು ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನ ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ಭಾಗವಹಿಸಿ ಪ್ರೋತ್ಸಾಹ ನೀಡಿರೋದುಕ್ಕೆ ಅಭಿನಂದನೆ ಸಲ್ಲಿಸಿ, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಇಂದಿನ ಸಮಾಜದಲ್ಲಿ ರೋಗ ಮುಕ್ತ ಶರೀರಕ್ಕೆ ಯೋಗ,ಒತ್ತಡ ಮುಕ್ತ ಮನಸ್ಸಿಗೆ ಧ್ಯಾನ,ಅತ್ಯಂತ ಅವಶ್ಯಕವಾಗಿದೆ ಮತ್ತು ಪ್ರತಿಯೊಬ್ಬರು ಮಾನಸಿಕ ನೆಮ್ಮದಿ, ಶಾಂತಿ ,ಸಂತೋಷ ಬಯಸುತ್ತಿದ್ದಾರೆ ಹಾಗಾಗಿ ಪ್ರತಿ ಮನೆ- ಮನೆಯಲ್ಲಿ ಕುಟುಂಬದವರೆಲ್ಲರೂ ಜೊತೆಗೂಡಿ ಧ್ಯಾನ ಮಾಡಬೇಕೆಂದು ಶ್ರೀ ಎಸ್ ಎಚ್ ರೆಡ್ಡಿ ಜಿ ಯವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ನ ಪ್ರಜ್ಞಾ ಯೋಗಾ ಎಂಬ ವಿಶೇಷ ಮಕ್ಕಳ ಧ್ಯಾನ ಶಿಬಿರವನ್ನು ಪೂರ್ಣಗೊಳಿಸಿದ, ಮಕ್ಕಳು ಕಣ್ಣು ಮುಚ್ಚಿ ಓದುವುದು, ಬರೆಯುವುದು, ಬಣ್ಣಗಳನ್ನು, ಗುರುತಿಸುವುದು ಹೀಗೆ ಹಲವಾರು ಪ್ರಯೋಗಗಳನ್ನು ,ನೆರೆದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಪ್ರದರ್ಶಿಸಿ ಅತ್ಯಂತ ಪ್ರಶಂಸನಿಯಕ್ಕೆ, ಪಾತ್ರರಾದರು.ಈ ಕಾರ್ಯಕ್ರಮ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಹೊಸದಿಲ್ಲಿ, ನಿರ್ದೇಶನದ ಮೇರೆಗೆ, ಮತ್ತು ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ ಜಿ ಯವರ ಅಧ್ಯಕ್ಷತೆಯಲ್ಲಿ, ಮತ್ತು ಜೀವನ ಕಲೆ ಸಂಸ್ಥೆ ಯಾದಗಿರಿ ಜಿಲ್ಲೆ ಯವರ ಸಹಯೋಗದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು,ಸಿಬ್ಬಂದಿ ವರ್ಗ ಹಾಗೂ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆಯ ಸ್ವಯಂಸೇವಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ