ಮೌನವಾಯಿತು ನನ್ನೊಲವು
ನನ್ನೊಲವಿನ ಕಾದಂಬರಿಯ ಮುನ್ನುಡಿಯಲ್ಲಿ
ನೀನೇನು ಆಗಿರಲಿಲ್ಲ ನನಗೆ
ಆದರೂ ಅದ್ಹೇಗೆ ನನ್ನ ಪ್ರೇಮ ಪುಟಗಳೊಳಗೆ
ನೀನೊಂದು ಪಾತ್ರವಾಗಿ ಸೇರಿ ಹೋದೆ
ನನ್ನ ಸೌಂದರ್ಯಕೆ ಮಾರುಹೋದ ಕ್ಷಣಿಕ
ಪ್ರೀತಿ ಅನ್ನೋ ಬಲವಾದ ಅಸಡ್ಡೆ ನಿನ್ನ ಮೇಲೆ ನನಗೆ
ನೀ ವಿನಂತಿಸಿದ್ದು ಒಂದೇ
ಕಿರುನಗು ಸಾಕು ನೀ ನನ್ನವಳೇನುವ ಗುರುತಿಗೆ
ನನ್ನ ಮೇಲಿನ ನಿನ್ನ ಕಳಜಿ ಆಕರ್ಷಣೆಯ
ಪರಮವಾದಿ ಅಲ್ಲ ಅಂತ ಅನ್ನಿಸಲ್ಲೆ ಇಲ್ಲ
ನಿನ್ನ ಕಣ್ಣು ಪ್ರೀತಿಯ ಭಾವವ
ಒತ್ತಿ ಒತ್ತಿ ಹೇಳುತ್ತಿದರು ಮನ ಅರ್ಥೈಸಲೇ ಇಲ್ಲ
ನಿನ್ನ ಅಕ್ಷಿಯಲ್ಲಿ ಜಮಾವಣೆಯಾದ ಅಷ್ಟು ಪ್ರೀತಿ
ನನ್ನ ಅಂತಾರಳವ ವಿಚಲಿಸದೆ ಬಿಡಲಿಲ್ಲ
ಪದೇ ಪದೇ ನಿನ್ನ ಕಂಗಳ ಹಾವಳಿ
ಮೌನದ ನೋಟ ಪರಿ ಪರಿಯಾಗಿ ವಿನಂತಿಸೊ
ಭಾವನುರಾಗ ನನ್ನ ಮನದ ಮೂಲೆಯಲ್ಲಿ
ಹುಟ್ಟಿ ಕೊಂಡಿತ್ತು ಒಲವು ನಯನ ಹುಡುಕುತ್ತಿತು ನಿನ್ನ
ಬಿಡದೆ ಕಾಡೊ ಕನಸಿನೊಳಗಿನ ಕನವರಿಕೆ ನಿನಾದೆ
ರಾಮನ ಕಿರುನಗುವಿಗೆ ಮುಗುಳು ನಗೊ ಮೈಥಿಲಿಯದೆ ನಾ ಇಷ್ಟದರು ನಾವು ಮಾತಡಲಿಲ್ಲ
ನೀ ಕೇಳಲು ಇಲ್ಲ ನಾನಗಿ ಹೂ ನಗು ಬಿರಲು ಇಲ್ಲ
ಉಳಿದೆ ಹೊಯಿತು ಮೌನವಾಗಿ
ಹೇಳಬೇಕಿದ ನನ್ನ ಒಲವು.
-ಭೂಮಿಕಾ(ಸವಿತಾ.ಡಿ)
ಬೆಂಗಳೂರು