ಪ್ರೀತಿಗೆ ಜಾತಿ ಹೇಗೆ ಮುಖ್ಯವಲ್ಲವೋ
ಮೋತಿಯ ಬಣ್ಣವೂ ಮುಖ್ಯವಲ್ಲ
ಪ್ರೀತಿ ರೀತಿ ನೀತಿಯೊಳಗಿರಲಿ
ಮಮತೆ ಮಮಕಾರದೊಳಗಿರಲಿ…..!!
ಪ್ರೀತಿಗೆ ಹಣ ಹೇಗೆ ಬೇಕಿಲ್ಲವೋ
ಮುಖದ ಮೇಲಿನ ಲಕ್ಷಣವೂ ಮುಖ್ಯವಲ್ಲ
ಪ್ರೀತಿಯು ಆಸ್ತಿ ಅಂತಸ್ತನ್ನು ಮೀರಿರಲಿ
ಮೋಜು ಮಸ್ತಿಯಿಂದ ದೂರಿರಲಿ…..!!
ಪ್ರೀತಿಗೆ ವಿದ್ಯಾರ್ಹತೆ ಹೇಗೆ ಮುಖ್ಯವಲ್ಲವೋ
ಸಿದ್ಧಿ ಶೋಧವೂ ಮುಖ್ಯವಲ್ಲ
ಪ್ರೀತಿಯು ಶುದ್ಧ ಬುದ್ಧಿಯೊಳಗಿರಲಿ
ಶುಭ್ರ ಮನಸ್ಸನ್ನು ಹೊಂದಿರಲಿ…..!!
ಪ್ರೀತಿಗೆ ಬೈಕು ಕಾರು ಹೇಗೆ ಮುಖ್ಯವಲ್ಲವೋ
ಶೋಕಿ ಕಾರುಬಾರು ಮುಖ್ಯವಲ್ಲ
ಪ್ರೀತಿಯು ಹೃದಯದಲಿ ಶಾಶ್ವತವಾಗಿ ಉಳಿಯುವಂತಿರಲಿ
ನೀರ ಮೇಲಿನ ಗುಳ್ಳೆಯಂತೆ ಹೊಡೆದು ಹೋಗದಿರಲಿ….!!
- ಹನುಮಂತ ದಾಸರ
ಯುವ ಕವಿ ಸಾಹಿತಿ ಬರಹಗಾರರು ಧಾರವಾಡ.