:ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಯ್ಯಗುಡ್ಡ ಗ್ರಾಮದ ಜನರಿಗೆ ಸತ್ತಾಗ ಅಂತ್ಯಕ್ರಿಯೆ ಮಾಡೋಕೆ ಒಂದು ದಾರಿ ಆದ್ರೂ ಬೇಕು. ಆದ್ರೆ ಅಂತ್ಯಕ್ರಿಯೆ ಮಾಡೋಕೆ ದಾರಿ ಹೇಗೆ ಎಂಬ ಪ್ರಶ್ನೆ ಈ ಗ್ರಾಮದಲ್ಲಿ ಉದ್ಭವಿಸುತ್ತಿದೆ.
ಈ ಹಳ್ಳಿಯಲ್ಲಿ ರುದ್ರಭೂಮಿಗೆ ತೆರಳುವ ಮಾರ್ಗವಿಲ್ಲ ಎಂದು ಅವರ ಸಮಸ್ಯೆಯನ್ನು ಹಾಲಿ ಶಾಸಕ ಸೋಮಲಿಂಗಪ್ಪ ಮತ್ತು ಮಾಜಿ ಶಾಸಕ ಬಿ ಎಂ ನಾಗರಾಜ್ ಹಾಗೂ ಅಧಿಕಾರಿಗಳಿಗೆ ಹೇಳಿಕೊಂಡಿದ್ದಾರೆ.
ಆದರೂ ಕಳೆದ 30 ವರ್ಷಗಳಿಂದ ಈ ಸಮಸ್ಯೆಯಿಂದ ಪರದಾಡುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು,
ಬಹುತೇಕ ಗ್ರಾಮದ ಜನರು ಗ್ರಾಮದಲ್ಲಿ ಸಾವಾದರೆ ರುದ್ರಭೂಮಿ ಇಲ್ಲದೆ ಯಾರದೋ ಹೊಲದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದರು ಆದ್ರೆ ಈಗ ಹಳ್ಳಿಯಲ್ಲಿ ರುದ್ರಭೂಮಿ ಇದ್ದರು ಅದಕ್ಕೆ ತೆರಳುವ ಮಾರ್ಗ ವಿಲ್ಲದೆ ಸಮಸ್ಯೆದಿಂದ ಪರದಾಡುವಂತಾಗಿದೆ
ಇಲ್ಲಿನ ಜನರಿಗೆ ಸ್ಮಶಾನಕ್ಕೆ ಹೋಗುವ ಮಾರ್ಗದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ಬೆಳೆ ಬೆಳೆದು ಫಲ ತೆಗೆದು ಕೊಳ್ಳುತ್ತಿದ್ದಾರೆ…
ಸ್ಮಶಾನಕ್ಕೆ ತೆರಳುವ ಮಾರ್ಗ ವನ್ನು ಹೊಲದ ರೂಪದಲ್ಲಿ ಬಿತ್ತಿ ಬೆಳೆಲಿಕ್ಕೆ ಉಪಯೋಗಿಸುತ್ತಿದ್ದಾರೆ….ಈ ಅನ್ಯಾಯವನ್ನು ಕೇಳೋರು ಇಲ್ಲದಂತಾಗಿದೆ…
ಹೀಗಾಗಿ ಹಲವು ಬಾರಿ ಸಿರುಗುಪ್ಪ ವಿಧಾನಸಭಾ ಶಾಸಕರಲ್ಲಿ ಮನವಿ ಮಾಡಿದರು ಪ್ರಯೋಜನ ವಾಗುತ್ತಿಲ್ಲ…
ಇಲ್ಲಿನ ಗ್ರಾಮದಲ್ಲಿ ರುದ್ರಭೂಮಿಗೆ ಹೋಗುವ ಮಾರ್ಗದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ…
ಸತ್ತರು ನೆಮ್ಮದಿ ಇಲ್ಲದ ಜೀವನವಾಗಿದೆ
ಎಷ್ಟೇ ಸರ್ಕಾರ ಬದಲಾದ್ರೂ… ಶಾಸಕರು ಬದಲಾದ್ರೂ… ಯಾವುದೇ ಪ್ರಯೋಜನ ವಿಲ್ಲದಂತಾಗಿದೆ….
ಹೆಣ-ಮನಿ ಬಾಗಿಲಲ್ಲಿ ಇಟ್ಕೊಂಡು ಕೈ ಕಾಲು ಮುಗಿಯುವಂತಹ ಪರಿಸ್ಥಿತಿ ಬಂದಿದೆ
ಈ ಗ್ರಾಮದಲ್ಲಿ
ಶಾಸಕರಿಗೆ ಅಧಿಕಾರಿಗಳಿಗೆ ಅನೇಕ ವರ್ಷಗಳಿಂದ ಮನವಿ ಸಲ್ಲಿಸಿದ್ದರು ಕೂಡಾ ನೋಡೋಣ ಮಾಡೋಣ ಎಂದು ಸಬೂಬು ಹೇಳುವುದನ್ನೇ ಮುಂದುವರಿಸುತ್ತಿದ್ದಾರೆ..
ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿ ಬೆಳೆ ಬೆಳೆಯುತ್ತಿದ್ದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಮಾಡಿಕೊಡುವುದಾಗಿ ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ
ಈಗಿನ ಶಾಸಕರು ಗ್ರಾಮಸ್ಥರ ಅಳುವನ್ನು ಆಲಿಸದೆ ಇರುವ ಕಾರಣ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ…
ಈಗ ಇರುವ ಶಾಸಕರ ಮೇಲೆ ಭರವಸೆ ಇಲ್ಲ…. ಚುನಾವಣೆ ಅಗೋವರೆಗೂ ಮಾಡಿಕೊಡುತ್ತೀವಿ ಅಂತ ಸಬೂಬು ಹೇಳಿ ಮುಂದುವರೆಸಿ ಚುನಾವಣೆ ಆದ ಮೇಲೆ ನೀವು ಯಾರು ಅನೋ ರೀತಿಯಲ್ಲಿ ಮಾತಾನಾಡುತ್ತಿರುವುದು ಗ್ರಾಮಸ್ಥರಿಗೆ ಬೇಸರದ ಸಂಗತಿ ಆಗಿದೆ…
ಸರ್ಕಾರಕ್ಕೆ ಇಚ್ಛಾಶಕ್ತಿ ಮಾನವೀಯತೆ ದೃಷ್ಠಿಯಿಂದ ಇದರಲ್ಲಿ ಪಕ್ಷ ಪಾತ ಮಾಡದೇ ಗ್ರಾಮೀಣ ಜನರಿಗೆ ಸ್ಮಶಾನಕ್ಕೆ ಹೋಗುವ ದಾರಿ ಮಾಡಿ ಕೊಡುವುದಕ್ಕೆ ಆಗುತ್ತಿಲ್ಲ ಇಲ್ಲಿನ ಹಾಲಿ ಶಾಸಕರಿಗೆ ಮತ್ತು ಮಾಜಿ ಶಾಸಕರಿಗೆ…. ಛೀ ಮಾರಿ ಹಾಕುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು
ಎಲ್ಲೋ ಕಣ್ಣಿಗೆ ಕಾಣದ ಕೇಂದ್ರ ಸರ್ಕಾರದಲ್ಲಿ ಯೋಜನೆಗಳು ಮಾಡಿ ಹೆಸರು ಮಾಡುವುದಲ್ಲ… ಗ್ರಾಮ ಮಟ್ಟದಲ್ಲಿ …..ಕಣ್ಣಿಗೆ ಕಾಣುವ ಸಮಸ್ಯೆಯನ್ನು ಬಗೆಹರಿಸಿ ಮೊದಲು…ಗ್ರಾಮ ಮಟ್ಟದಲ್ಲಿ ಪ್ರಗತಿ ಕಂಡುಬಂದಾಗ ಮಾತ್ರ ಕೇಂದ್ರ ದಲ್ಲಿ ಪ್ರಗತಿ ಕಾಣೋದು…. ಎಂದು ತಮ್ಮಆಕ್ರೋಶ ವನ್ನು ತೋರ್ಪಡಿಸುತ್ತಿದ್ದಾರೆ
ಇಲ್ಲಿನ ಗ್ರಾಮಸ್ಥರು
ಚುನಾವಣೆ ಹತ್ತಿರ ಬಂದಾಗ ಮಾತ್ರ ಗ್ರಾಮಸ್ಥರು ನೆನಪಾಗೋದು ಚುನಾವಣೆ ಮುಗಿದ ನಂತರ ನೀವ್ಯಾರೂ ಅನ್ನುವ ಶಾಸಕರು ಇರುವುದು ನಾಚಿಗೀಡು ಸಂಗತಿ..ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯನ್ನು ಮಾಡದೆ ಇರುವ ಶಾಸಕರು ದೊಡ್ಡ ದೊಡ್ಡ ಹೆದ್ದಾರಿ ಗಳು ಮಾಡುತ್ತಾರೆ ಅನುವುದು ನಮಗೆ ಭರವಸೆ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ…
ಆದ ಕಾರಣ ಮುಂಬರುವ ಶಾಸಕರಿಗೆ ನಮ್ಮ ಮನವಿಯನ್ನು ಈ ಮಾಧ್ಯಮದ ಮೂಲಕ ತಿಳುಸುತ್ತಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಅಳುವನ್ನು ತೋಡಿಕೊಂಡರು…
ವರದಿ ಎಂ ಪವನ್ ಕುಮಾರ್
ಕರುನಾಡ ಕಂದ ಪತ್ರಿಕೆ ವರದಿಗಾರ ಸಿರುಗುಪ್ಪ