ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಯ, ಶ್ರೀ ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರು ಖಾಜಿ ಮಲ್ಲಿಕ್ ವಕೀಲರು ನೇತೃತ್ವದಲ್ಲಿ ಮಾನ್ಯ ತಹಸೀಲ್ದಾರರು ಸಿಂಧನೂರು ಇವರ ಮುಖಾಂತರ ವಾಣಿಜ್ಯ ಮತ್ತು ಗೃಹ ಉಪಯೋಗಿ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾನ್ಯ ಘನವೆತ್ತ ರಾಷ್ಟ್ರಪತಿಗಳು, ರಾಷ್ಟ್ರಪತಿ ಭವನ ನವದೆಹಲಿ ಇವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ನಿರುಪಾದಪ್ಪ ವಕೀಲ ಗುಡಿಹಾಳ ಮಾತನಾಡಿ, ಕೇಂದ್ರ ಸರ್ಕಾರದ ಗ್ಯಾಸ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್, ಡೀಸೆಲ್, ದಿನಬಳಕೆ ಗೃಹ ಉಪಯೋಗಿ ವಸ್ತುಗಳ ಬೆಲೆಯನ್ನು ಕೇಂದ್ರ ಸರ್ಕಾರವು ದೊರಿಸುತ್ತಾ ಬಂದಿದ್ದು, ಗಾಯದ ಮೇಲೆ ಬೇರೆ ಎಳೆದಂತೆ ಈ ಜನ ವಿರೋಧಿ ಬಿಜೆಪಿ ಸರ್ಕಾರವು ಪದೇ ಪದೇ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುತ್ತಲೇ ಬಂದಿದೆ. ಈಗ ಏಕಾಏಕಿ ಗ್ಯಾಸ್ ಸಿಲೆಂಡರ್ ಬೆಲೆಯನ್ನು 50 ರೂಪಾಯಿಗಳನ್ನು ಏರಿಸಿರುತ್ತಾರೆ. ಇದು ಜನ ಸಾಮಾನ್ಯರಿಗೆ ನುಂಗಲಾರದ ತುತ್ತಾಗಿರುತ್ತದೆ. ದುಡಿಯುವ ಬಡವರ್ಗದ ಜನರಿಗೆ, ಕೂಲಿ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿರುತ್ತದೆ ಎಂದು ಕಿಡಿಕಾರಿದರು. ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸುತ್ತೇವೆ. ಆದಷ್ಟು ಬೇಗನೆ ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ದೊರೆಯುವಂತೆ ಗ್ಯಾಸ್ ಸಿಲಿಂಡರ್ ಅನ್ನು ವಿತರಿಸಲು ಮಾನ್ಯ ಘನವೆತ್ತ ರಾಷ್ಟ್ರಪತಿಗಳು, ತಾವುಗಳು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ವಿನಂತಿಸಿಕೊಳ್ಳುತ್ತೇನೆ ಎಂದು ಖಾಜಿ ಮಲ್ಲಿಕ್ ವಕೀಲರು ಹೇಳಿದರು. ಹಾಗೂ ಇದೆ ವೇಳೆ ಶ್ರೀದೇವಿ ಮಹಿಳ ಘಟಕ ಕಾಂಗ್ರೆಸ್ ಮಾಜಿ ಅಧ್ಯಕ್ಷರು ತಲೆಯ ಮೇಲೆ ಸಿಲಿಂಡರನ್ನು ಹೊತ್ತುಕೊಂಡು ಮಾತನಾಡಿ, ನರೇಂದ್ರ ಮೋದಿ ಬೆಲೆ ಏರಿಕೆ ಮಾಡಿ ಜನರ ಜೀವವನ್ನು ಹಿಂಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಯುಪಿಎ ಅವಧಿಯಲ್ಲಿ 450 ಇದ್ದ ಅಡುಗೆ ಅನಿಲ ಸಿಲಿಂಡರ್ ಇಂದು 1150ರೂ ಆಗಿದೆ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಒಂದೇ ದಿನ ಇಂದು 50ರೂ ಏರಿಕೆ ಆಗಿದೆ. ಇದರಿಂದ ಜನ ಸಾಮಾನ್ಯರ ಬದುಕು ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ, ನರೇಂದ್ರ ಮೋದಿ ಸರ್ಕಾರ ದೇಶದಿಂದ ತೊಲಗದೇ ಹೋದರೆ ಜನರ ಬದುಕು ಅತ್ಯಂತ ಸಂಕಷ್ಟದಲ್ಲಿ ಮುಳುಗಿ ಹೋಗುತ್ತದೆ. ಜನರ ಸಮಸ್ಯೆಯನ್ನ ಅರಿಯದ ನರೇಂದ್ರ ಮೋದಿ ಬೆಲೆ ಏರಿಕೆ ಮಾಡಿ ಜನರ ಜೀವವನ್ನು ಹಿಂಡುತ್ತಿದ್ದಾರೆ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಎಲೆಕ್ಷನ್ ಬರಲಿದ್ದು , ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.ಈ ಪ್ರತಿಭಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಾಬುಗೌಡ ಬಾದರ್ಲಿ, ನಿರುಪಾದಪ್ಪ ವಕೀಲ ಗುಡಿಹಾಳ, ಶೇಖರಪ್ಪ ಗಿಣಿವಾರ, ಶ್ರೀದೇವಿ ಮಾಜಿ ಮಹಿಳಾ ಘಟಕ ಕಾಂಗ್ರೆಸ್ ಅಧ್ಯಕ್ಷರು,ಬ್ಲಾಕ್ ಕಾಂಗ್ರೆಸ್ ಮುಖಂಡರು, ಶ್ರೀ ಹಂಪನಗೌಡ ಬಾದರ್ಲಿ ಅಭಿಮಾನಿಗಳು, ತಿಮ್ಮಣ್ಣ ಮಲ್ಲಾಪುರ, ಹನುಮೇಶ ನಾಯಕ ಮುಳ್ಳೂರ್ , ವಾಗೆಶ್ರೀ ಗೆಳೆಯರ ಬಳಗ ಸೋಶಿಯಲ್ ಮೀಡಿಯಾ, ಅನೇಕ ಕಾರ್ಯಕರ್ತರು ಹಾಜರಿದ್ದರು.
ವರದಿ//ವೆಂಕಟೇಶ.ಹೆಚ್.ಬೂತಲದಿನ್ನಿ.
