ಸಿಂಧನೂರಿನ ಸತ್ಯ ಗಾರ್ಡನ್ ನಲ್ಲಿ ನೋಬಲ್ ಟೆಕ್ನೊ ಸ್ಕೂಲ್ ನ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೋಬೆಲ್ ಚಿಣ್ಣರ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೋರ್ವ ರಾಜ್ಯದಲ್ಲೇ ಹೆಸರುವಾಸಿಯಾದ ಸಿಂಧನೂರಿನಲ್ಲಿ ಮರುಜೀವ ಪಡೆದ ಅಮರ ಶ್ರೀ ಆಲದ ಮರದ ಬಗ್ಗೆ ಮಾಹಿತಿ ನೀಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸಿಂಧನೂರಿನ ಸತ್ಯಗಾರ್ಡನ್ ನಲ್ಲಿ ಶನಿವಾರ ನಡೆದ ನೋಬಲ್ ಟೆಕ್ನೊ ಸ್ಕೂಲ್ ನ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೋಬೆಲ್ ಚಿಣ್ಣರ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೋರ್ವ ಮಾತನಾಡಿ ಸಿಂಧನೂರಿನ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ರೈತನೊಬ್ಬ ಕಿತ್ತು ಹಾಕಿದ 30ವರ್ಷದ ಆಲದ ಮರಕ್ಕೆ ಮರುಜೀವ ನೀಡಿದ್ದಾರೆ. ಏಳುರಾಗಿ ಕ್ಯಾಂಪ್ ನಿಂದ ಜೇಸಿಬಿ ಮೂಲಕ ನಮ್ಮ ಸಿಂಧನೂರಿನ PWDಕ್ಯಾಂಪಿನ ನೀರಾವರಿ ಇಲಾಖೆಯ ಆವರಣದಲ್ಲಿ ಗಿಡವನ್ನು ನೆಟ್ಟು ಪರಿಸರ ಪ್ರೇಮವನ್ನು ಇಡೀ ಜಗತ್ತಿನಲ್ಲಿ ಸಾರಿದ್ದಾರೆ.ಇಂತಹ ಒಂದು ವನಸಿರಿ ತಂಡ ನಮ್ಮ ಸಿಂಧನೂರಿನಲ್ಲಿ ಇರುವುದು ನಮ್ಮ ಹೆಮ್ಮೆಯ ವಿಷಯ.ರಾಜ್ಯಾದ್ಯಂತ ಹಸರುಕರಣ ಮಾಡಲು ಇಂತಹ ತಂಡಗಳಿಗೆ ನಾವುಗಳೆಲ್ಲರೂ ಸಹಕಾರ,ಪ್ರೋತ್ಸಾಹ ನೀಡುವ ಮೂಲಕ ಉತ್ತೇಜಿಸಬೇಕು ಎಂದು ವಿದ್ಯಾರ್ಥಿ ಮಾತನಾಡಿದನು.
ಈ ಕಾರ್ಯಕ್ರಮದಲ್ಲಿ ವನಸಿರಿ ಫೌಂಡೇಶನ್ ಬಗ್ಗೆ ಮಾಹಿತಿ ಮತ್ತು ವಿಶೇಷವಾಗಿ ಅಮರ ಶ್ರೀ ಆಲದ ಮರದ ಬಗ್ಗೆ, ಪರಿಸರ ಜಾಗೃತಿ ಮೂಡಿಸಿದ ವಿದ್ಯಾರ್ಥಿಗೆ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ನೋಬಲ್ ಟೆಕ್ನೊ ಸ್ಕೂಲ್ ಆಡಳಿತ ಮಂಡಳಿಗೆ ವನಸಿರಿ ಫೌಂಡೇಶನ್ ವತಿಯಿಂದ ಧನ್ಯವಾದಗಳು ಎಂದು ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನೋಬೆಲ್ ಟೆಕ್ನೊ ಸ್ಕೂಲ್ ಆಡಳಿತ ಮಂಡಳಿಯ ಸದಸ್ಯರು,ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.