ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸರ್ವಧರ್ಮದವರಿಗೆ ಸಮಾನತೆ ಕಲ್ಪಿಸಿಕೊಟ್ಟ ಶ್ರೀ ಜಗದ್ಗುರು ರೇಣುಕಾಚಾರ್ಯ

ಇಂಡಿ: ಸಿದ್ಧಾಂತ ಶಿಖಾಮಣಿಯಂತಹ ಮಹಾನ ಗ್ರಂಥವನ್ನು ಕೊಡುಗೆಯಾಗಿ ಅವರು ನೀಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ತಹಶೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧ ಆವರಣದಲ್ಲಿ ಹಮ್ಮಿಕೊಂಡ ತಾಲೂಕ ಆಡಳಿತ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮಗ್ರಂಥ ವಚನ ಸಾಹಿತ್ಯದಲ್ಲಿ ತತ್ವ ಸಾರಾಂಶ- ವಿಮರ್ಶೆ ಇದೆ ಆದರೂ ಇದು ಧರ್ಮಗ್ರಂಥ ಆಗಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳಿಗೂ ತನ್ನದೆ ಆದ ಗುಣ ಧರ್ಮಗಳಿರುತ್ತವೆ ಎಂದು ಹೇಳಿದರು.

ಜಿಲ್ಲಾ ಜಂಗಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಹಾಗೂ ಇಂಡಿ ತಾಲೂಕು ಜಂಗಮ ಸಮಾಜದ ಹಿರಿಯ ನ್ಯಾಯವಾದಿ ಎಸ್.ಎಲ್.ಹಿರೇಮಠ ಮಾತನಾಡಿ, ಸಾಮರಸ್ಯ ಸಹಬಾಳ್ವೆ ಸೌಹಾರ್ದತೆ ಬದುಕನ್ನು ಅವರು ಬೋಧಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಇವರು ಲಕ್ಷಾಂತ ಭಕ್ತ ಸಮೂಹವನ್ನು ಹೊಂದಿದ್ದಾರೆ.ಈ ಕಲಿಯುಗದಲ್ಲಿ ಮಾನವನ ಆಸೆ, ಆಸೆಹೆಗಳನ್ನು ತಡೆದು ಹಾಕಿ ಸಮಾಜದ ಒಳತಿಗಾಗಿ ಬದುಕಬೇಕು ಧರ್ಮವನ್ನು ರಕ್ಷಣೆ ಮಾಡುವವರು ನಾವು, ಆದರೆ ಧರ್ಮದ ನಮ್ಮನ್ನು ರಕ್ಷಣೆ ಮಾಡುವಂತೆ ಪರಸ್ಥಿತಿ ನಿರ್ಮಾಣವಾಗಿದೆ. ಜ್ಯೋತಿ ಸ್ವರೂಪಿಯಾದ ರೇಣುಕಾಚಾರ್ಯರು ಸಮಾಜದ ಬದಲಾವಣೆಗಳಿಗೆ ಸಂದೇಶಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಪತ್ರಕರ್ತ ಶಿವಯ್ಯ ಹಿರೇಮಠ ಮಾತನಾಡಿ, ಜಂಗಮರ ಸಂಸ್ಥಾಪಕರಾದ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರ ಆದೇಶದ ಪ್ರಕಾರ ನಮ್ಮ ಇಂಡಿ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಆಚರಣೆ ನಾಗಯ್ಯ ಹಿರೇಮಠ ಸಮ್ಮುಖದಲ್ಲಿ ಆಚರಿಸಿ ಅದೇ ರೀತಿ ಈ ನಮ್ಮ ರೇಣುಕಾಚಾರ್ಯ ಜಯಂತಿಯಲ್ಲಿ ಸರ್ವ ಧರ್ಮದವರಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮುರುಗೇಂದ್ರ ಶಿವಚಾರ್ಯರು ಅಥರ್ಗಾ, ಮಲ್ಲಿಕಾರ್ಜುನ ಶಿವಚಾರ್ಯರು ಆಹಿರಸಂಗ ಆಶೀರ್ವಚನ
ನೀಡಿದರು.

ಶಿವಯೋಗಿ ರೂಗಿಮಠ, ಶಿವಯ್ಯ ಮಠಪತಿ, ಷಡಕ್ಷರಿ ಹಿರೇಮಠ, ಎಸ್.ಎಸ್ ಸ್ವಾಮಿ, ಸಿ.ಜಿ.ಹಿರೇಮಠ, ಶ್ರೀಕಾಂತ ಕೂಡಿಗನೂರ, ಆಜೀತ ಹಿರೇಮಠ, ಪ್ರವೀಣ ಹಿರೇಮಠ, ಸೋಮು ಹಿರೇಮಠ, ಎಸ್‌.ಎಸ್‌.ಗಾಳಿಮಠ ದಾನಯ್ಯ ಹಿರೇಮಠ, ಸುಭಾಸ ಹಿರೇಮಠ, ಬಸವರಾಜ ಪತ್ರಿಮಠ, ಶಾಂತಯ್ಯ ಹಿರೇಮಠ, ಪ್ರವೀಣ ಹಿರೇಮಠ ಸೇರಿದಂತೆ ಅನೇಕರು ಇದ್ದರು

ವರದಿ:ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ