ಸಿಂಧನೂರು//ಮಾ5. ಇಂದು ಕಲ್ಯಾಣರಾಜ್ಯ ಪ್ರಗತಿಪಕ್ಷ ಸಂಸ್ಥಾಪಕರಾದ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಸಿಂಧನೂರು ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿಯವರ ನೇತೃತ್ವದಲ್ಲಿ ಸಿಂಧನೂರು ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುವ ಜಾಲಿಹಾಳ ಕೆ ಹೊಸಳ್ಳಿ ಹಾಗೂ ಕೆ ಹಂಚಿನಾಳ ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮದ ಜನರು ಬೈಕ್ ರ‍್ಯಾಲಿ, ಡೊಳ್ಳು ವಾದ್ಯಗಳು ಹಾಗೂ ಪಟಾಕಿ ಬಿಡುವ ಮೂಲಕ ತುಂಬಾ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು. ನಂತರ ಗ್ರಾಮದ ಜನತೆ ಕುಂದು ಕೊರತೆಗಳು ವಿಚಾರಿಸಿ ಅವುಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು ಹಾಗೂ ಗ್ರಾಮಗಳ ದೇವಸ್ಥಾನಗಳಿಗೆ ಭೇಟಿ ನೀಡಿ ಕನ್ನಡ ರಾಜ್ಯ ಪ್ರಗತಿ ಪಕ್ಷದ ಏಳಿಗೆ ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಮಾತನಾಡಿ, ಎಲ್ಲಾ ಗ್ರಾಮಗಳನ್ನು ಜಾತಿ ಭೇದವಿಲ್ಲದೆ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು.ಮತ್ತು ಈ ಭಾಗದ ರೈತರಿಗೆ ಒಳಿತಿಗಾಗಿ ಸಮಾನಾಂತರ ಜಲಸಕ್ಕೆ ನಿರ್ಮಾಣಕ್ಕೆ ವರ್ತನೆ ನೀಡುತ್ತೇನೆ, ಮಹಿಳೆಯರ ಅಭಿವೃದ್ಧಿ ನಾನಾ ಯೋಜನೆಗಳನ್ನು ಜಾರಿಗೆ ತರುವೆ, ಯುವಕ ಯುವತಿಯರಿಗೆ ಉದ್ಯೋಗಗಳನ್ನು ಒದಗಿಸುವೆ. ಸಿಂಧನೂರು ಭಾಗದಲ್ಲಿ ಕಾರ್ಖಾನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮಗಳ ವಿವಿಧ ಪಕ್ಷದ ಮುಖಂಡರು, ಉತ್ಸಾಹಿ ಯುವಕರು ಕಲ್ಯಾಣ ರಾಜ ಪ್ರಗತಿಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮದ ಅನೇಕ ಮುಖಂಡರು, ಜನಾರ್ಧನ್ ರೆಡ್ಡಿ ಅಭಿಮಾನಿ ಬಳಗ, ಮಲ್ಲಿಕಾರ್ಜುನ ನೆಕ್ಕಂಟಿ ಅಭಿಮಾನಿ ಬಳಗ, ಯುವ ಮುಖಂಡ ಶಿವು ಹಿರೇಮಠ , ಹನುಮಗೌಡ ಹಟ್ಟಿ, ಪ್ರತಾಪ್ ರೆಡ್ಡಿ, ಹಾಗೂ ಅನೇಕ ಮುಖಂಡರು ಉಪಸ್ಥಿತಿಯಲ್ಲಿದ್ದರು.
ವರದಿ// ವೆಂಕಟೇಶ.ಹೆಚ್. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.