ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ಲ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಬಾಗದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ಧೂಮಪಾನ ಮಾಡುವ ವ್ಯಕ್ತಿಗಳಿಂದ ಕಾಡ್ಗಿಚ್ಚಾಗಿ ಸುಮಾರು ಸಸಿಗಳು ಸುಟ್ಟು ಹೋಗಿದ್ದನ್ನು ತಿಳಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಸ್ಥಳಕ್ಕೆ ಭೇಟಿ ನೀಡಿ ಸಸಿಗಳು ಸುಟ್ಟಿರುವದನ್ನು ವೀಕ್ಷಣೆ ಮಾಡಿ ಆತಂಕ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ವನಸಿರಿ ಫೌಂಡೇಶನ್ ಹಲವಾರು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗವನ್ನು ಹಸಿರುಕರಣಗೊಳಿಸುವಲ್ಲಿ ಕಾರ್ಯದಲ್ಲಿ ತೊಡಗಿದೆ ಆದರೆ ನಮ್ಮ ಭಾಗದಲ್ಲಿ ಬೇಸಿಗೆ ಹೆಚ್ಚಾಗಿದ್ದರಿಂದ ಕೆಲದಿನಗಳಿಂದ ಎಲ್ಲೆಂದರಲ್ಲಿ ಸಸಿಗಳು ಬೆಂಕಿಗೆ ತಗುಲಿ ಸುಟ್ಟುಹೋಗುತ್ತಿವೆ.ಕೆಲವು ದಿನಗಳ ಹಿಂದೆ ಮಸ್ಕಿ ತಾಲೂಕಿನ ಹೂವಿನಭಾವಿ,ರಾಯಚೂರು ಸಿಂಧನೂರು ರಸ್ತೆ ಹೆದ್ದಾರಿಗಳಲ್ಲಿ ಧೂಮಪಾನ ಮಾಡಿದ ವ್ಯಕ್ತಿಗಳಿಂದ ಸುಟ್ಟುಹೋಗಿವೆ. ಇದೀಗ
ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಉನ್ನತೀಕರಿಸಿದ ಸರಕಾರಿ ಶಾಲೆಯ ಮುಂಭಾಗದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಕೂಡಾ ಶನಿವಾರ ಯಾರೋ ಧೂಮಪಾನ ಮಾಡುವ ವ್ಯಕ್ತಿಗಳು ಧೂಮಪಾನ ಮಾಡಿ ಬೆಂಕಿಕಡ್ಡಿಯನ್ನು ಆರಿಸದೇ ಹಾಗೆ ಎಸೆದಿರುವುದರಿಂದ ಗುಡ್ಡಗಾಡು ಪ್ರದೇಶದಲ್ಲಿ ಸುಮಾರು ಸಸಿಗಳ ಸುಟ್ಟು ಹೋಗಿವೆ ಎಂದು ಕಳವಳ ವ್ಯಕ್ತಪಡಿಸಿ ದಯವಿಟ್ಟು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ತಾವು ಧೂಮಪಾನ ಮಾಡುವಾಗ ಬೆಂಕಿಕಡ್ಡಿ ಆರಿಸಿ ಎಸೆಯಬೇಕು ಮತ್ತು ಆಕಸ್ಮಿಕವಾಗಿ ಸಸಿಗಳಿಗೆ ಎಲ್ಲಿಯಾದರೂ ಬೆಂಕಿ ತಗುಲಿದರೆ ನೀರು ಹಾಕಿ ಆರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.