ಕೊಪ್ಪಳ ಜಿಲ್ಲೆಯ ಯಲಬುರ್ಗಾ:
ತಾಲೂಕಿನ ಯಡ್ಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾದ ವಿಶ್ವನಾಥ ತಂದೆ ಯಮನೂರಪ್ಪ ಹಡಪದ ವಿಭಾಗ ಮಟ್ಟದ ( 5 ರಿಂದ 7 ನೇ ತರಗತಿ) ರಸ ಪ್ರಶ್ನ ಸ್ಪಧೆ೯ಯಲ್ಲಿ ದ್ವೀತಿಯ ಸ್ಥಾನ ಪಡೆದು ರಾಜ್ಯಮಟ್ಟದ ರಸಪ್ರಶ್ನೆ ಸ್ಪಧೆ೯ಗೆ ಆಯ್ಕೆಯಾಗಿದ್ದಾನೆ.
ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮದಡಿ,ಅಜಾದಿ ಕಾ ಅಮೃತ್ ಮಹೋತ್ಸವ ,ಅಂಗವಾಗಿ ದೇಶದ ಶ್ರೀಮಂತ ಪರಂಪರೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ರಸಪ್ರಶ್ನೆ ಸ್ಪಧೆ೯ಯನ್ನು ಆನ್ ಲೈನ್ ಮೂಲಕ ಸಕಾ೯ರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ತಾಲೂಕು,ಜಿಲ್ಲಾ,ವಿಭಾಗ, ಹಾಗೂ ರಾಜ್ಯ ಮಟ್ಟ ವಿವಿಧ ಹಂತಗಳಲ್ಲಿ ಸ್ಫಧೆ೯ ಆಯೋಜಿಸಲಾಗಿದೆ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು,
ಸರ್ವ ಶಿಕ್ಷಕರು,ಎಸ್ಡಿಎಂಸಿ ಅಧ್ಯಕ್ಷರು ,ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಅಭಿನಂದಿಸಿದ್ದಾರೆ.