ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹುಡಾ ಗ್ರಾಮದಲ್ಲಿ ಜೆಡಿಎಸ್ ಪಕ್ಷ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಸಿಂಧನೂರು//ಮಾ5. ಇಂದು ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಶ್ರೀ ಹಂಪನಗೌಡ ಬಾದರ್ಲಿ ಇವರ ನೇತೃತ್ವದಲ್ಲಿ ‘ಹಂಪನಗೌಡರ ನೆಡೆ ಹಳ್ಳಿಯ ಕಡೆ’ ಗ್ರಾಮೀಣ ಜನತೆಯ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ
ರಾಜಕೀಯ, ಆರೋಗ್ಯ, ನೀರಾವರಿ, ಶೈಕ್ಷಣಿಕ ವಿಚಾರ ಮತ್ತು ಗ್ರಾಮ ಪಟ್ಟಣಗಳ ಅಭಿವೃದ್ಧಿ ಸಾಮಾಜಿಕ ವ್ಯವಸ್ಥೆ ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಪ್ರತಿ ಗ್ರಾಮಗಳಲ್ಲಿ ಗ್ರಾಮೀಣ ಜನರ ಜೊತೆ ಸಂವಾದ ಕಾರ್ಯಕ್ರಮ ಇಂದು ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 1.30 ರವರೆಗೆ ತಾಲ್ಲೂಕಿನ ಹುಡಾ ಗ್ರಾಮದಲ್ಲಿ ಜನ ಸೇವೆಗಾಗಿ ಮತ್ತೊಮ್ಮೆ ಹಂಪನಗೌಡ ಬಾದರ್ಲಿ ಎಂದು ಬೈಕ್ ರ‍್ಯಾಲಿ, ಡೊಳ್ಳು ಕುಣಿತ, ಪಟಾಕಿ ಸಿಡಿಸುವ ಮೂಲಕ ಅದ್ದೂರಿಯಾಗಿ ಗ್ರಾಮದ ಮುಖಂಡರು ಸ್ವಾಗತಿಸಿದರು.ನಂತರ ಸನ್ಮಾನ್ಯ ಶ್ರೀ ಹಂಪನಗೌಡ ಬಾದರ್ಲಿಯವರ 2013-2018 ರ ಆಡಳಿತ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು, ಅವರ ನಾಯಕತ್ವವನ್ನು, ಕಾಂಗ್ರೇಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ, ಜೆಡಿಎಸ್ ಪಕ್ಷದ ದುರಾಢಳಿತಕ್ಕೆ ಬೆಸತ್ತು ಇಂದು ಹುಡಾ ಗ್ರಾಮದ ಹನುಮಂತಪ್ಪ ಉಪ್ಪಾರ, ಮೈಬುಬ್ ಸಾಬ್ ರೌಡಕುಂದ, ಗುರಪ್ಪ ಬೋವಿಯವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೇಸ್ ಪಕ್ಷಕ್ಕೆ ಆಗಮಿಸಿದ ಆತ್ಮೀಯ ಮುಖಂಡರೇಲ್ಲರಿಗೂ ಪ್ರೀತಿಯ ಸ್ವಾಗತ ಕೋರುತ್ತೇನೆ ಎಂದು ಶ್ರೀ ಹಂಪನಗೌಡ ಬಾದರ್ಲಿಯವರು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು,ಜಿ. ಪಂ. ಮಾಜಿ ಸದಸ್ಯರಾದ ಬಸವರಾಜ್ ಗೌಡ, ಬಾಬುಗೌಡ ನಗರ ಸಭೆಯ ಅಧ್ಯಕ್ಷ ಜಾಫರ್ ಸಾಬ್ ಜಾಗೀರ್ದಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜು ಮಲ್ಲಿಕ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಶೇಖರಪ್ಪ ಗಿಣೀವಾರ, ಪಂಪನಗೌಡ, ಖಾಜು ಮಲ್ಲಿಕ್, ನಿರುಪಾದಪ್ಪ ವಕೀಲ ಗುಡಿಹಾಳ, ಮಹಿಳ ಕಾಂಗ್ರೆಸ್ ಘಟಕ ಮಾಜಿ ಅಧ್ಯಕ್ಷ ಶ್ರೀದೇವಿ, ಎಸ್ .ಟಿ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ನಾಯಕ ಮುಳ್ಳೂರ, ವಾಗೆಶ್ರೀ ಗೆಳೆಯರ ಬಳಗ ಹಾಗೂ ಅನೇಕ ಮುಖಂಡರು ಉಪಸ್ಥಿತಿಯಲ್ಲಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ