ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ರಸ್ತೆಯ ನಡುವೆ ಡಿವ್ಯಡರ್ ನಲ್ಲಿ ಕನ್ನಡ ಭುವನೇಶ್ವರಿಯ ಧ್ವಜ ಸ್ತಂಭವನ್ನು ನಿರ್ಮಾಣ ಮಾಡಿದ್ದು
ಇದನ್ನೂ ಪಿ ಡಬ್ಲ್ಯೂ ಇಲಾಖೆ ಅಧಿಕಾರಿಗಳು ಜನವರಿ ತಿಂಗಳಲ್ಲಿ
ಹೊಡೆದು ಹಾಕಿದ್ದರು
ದಿನಾಂಕ 4/3/2023ರಂದು ನಮ್ಮ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರಸನ್ನ ಗೌಡರ ಕರೆಯ ಮೇರೆಗೆ
ರಾಜ್ಯ ರೈತಸಂಘ ಹಸಿರು ಮತ್ತು ಕ ನಾ ರಕ್ಷಣಾ ವೇದಿಕೆ ಕಾರ್ಯಕರ್ತರು PWD ಇಲಾಖೆ ಮುಖ್ಯ ಇಂಜಿನಿಯರ್ ನ್ನು ಭೇಟಿ ಮಾಡಿ
ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ
ಚನ್ನಬಸಪ್ಪ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರು
ಅಧಿಕಾರಿಗಳೇ ನೀವು ಕನ್ನಡ ನಾಡು ನುಡಿ ಜಾತ್ರೆಗೆ ಸಜ್ಜಾಗುತ್ತಿದ್ದ ನಮ್ಮ ಸಂತೋಷಕ್ಕೆ ದಕ್ಕೆ ತರುವ ಮೂಲಕ ನಾಡು ನುಡಿ ನೆಲ ಜಲ ಭಾಷೆ ಅಪಮಾನ ಮಾಡಿದ್ದಿರ
ಇದಕ್ಕೆ ಯಾರು ಹೊಣೆ ಎಂದು ಹೇಳಬೇಕು
ಎಂದು ಕೇಳಿದಾಗ
ಒಬ್ಬ ಪ್ರಭಾವಿ ವ್ಯಕ್ತಿಯ ಮಾತಿಗೆ. ಬಲಿಯಾಗಿ
ಇಂತಹ ಒಂದು ತಪ್ಪು ಮಾಡಿರುವುದಾಗಿ ತಿಳಿದುಬಂದಿದೆ
ನಾನು ಇಂತಹ ಕೆಲಸ ಮಾಡಿರುವುದು ಕನ್ನಡ ನಾಡು ನುಡಿ ನೆಲ ಜಲ ಭಾಷೆ ಭುವನೇಶ್ವರಿ ದೇವಿಯ ಧ್ವಜ ಸ್ತಂಭವನ್ನು ಧ್ವಂಸಗೊಳಿಸಿದು ತಪ್ಪು
ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದರು ಅದರಿಂದ ನಾನು ದಿನಾಂಕ 15ರಂದು ಅದೇ ಸ್ಥಳದಲ್ಲಿ ಧ್ವಜ ಸ್ತಂಭವನ್ನು ಪುನರ್ ನಿರ್ಮಾಣ ಮಾಡಿ ಕೊಡುತ್ತೇನೆ ಎಂದು ಹೇಳಿದರು ಎಂದು ಚನ್ನಬಸಪ್ಪ ಮಾತಾನಾಡಿದರು
ಕರ್ನಾಟಕ ರಾಜ್ಯ ರೈತಸಂಘ ಉಪಾಧ್ಯಕ್ಷರು ಗಣೇಶ ಕುರುವ ನಮ್ಮ ವಾಹಿನಿಯ ಜೊತೆ ಮಾತನಾಡಿ
ಇಂತಹ ಕೆಲಸ ಮಾಡಿರುವುದು ತುಂಬಾ ದುರದೃಷ್ಟಕರ ನಮ್ಮ ನೆಲದಲ್ಲೇ ನಾಡು ನುಡಿ ಗೆ ಗೌರವ ನೀಡುವ ಕೆಲಸವನ್ನು ಮಾಡಬೇಕು
ಒಬ್ಬ ಉನ್ನತ ಹುದ್ದೆ ಯಲ್ಲಿ ಇರುವಂತಹ ಸರ್ಕಾರಿ ನೌಕರರು ಅಪಮಾನ ಮಾಡಿರುವ ಕೆಲಸ ಮನಸಿಗೆ ನೋವಾಗಿದೆ ಎಂದು ಒಪ್ಪಿಕೊಂಡಿದ್ದಾರೆ
ಆದ್ದರಿಂದ ಅವರು ಅದೇ ಸ್ಥಳದಲ್ಲಿ ಧ್ವಜ ಸ್ತಂಭವನ್ನು ಪುನರ್ ನಿರ್ಮಾಣ ಮಾಡಿಕೂಡುತ್ತೆನೆ ಎಂದು ಹೇಳಿದ್ದಾರೆ
ಒಂದು ವೇಳೆ ಮಾಡಿದೆ ಇದ್ದಲ್ಲಿ ಉಗ್ರವಾದ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.