ಇಂಡಿ: ಚನ್ನಗಿರಿ ಶಾಸಕ, ಕೆಎಸ್‌ಐಡಿಎಲ್ ಮಾಜಿ ಅಧ್ಯಕ್ಷ ಮಾಡಳ ವಿರೂಪಾಕ್ಷ ಅವರನ್ನು ಕೂಡಲೆ ಬಂಧಿಸಬೇಕು ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಇಂಡಿ-ಬಳ್ಳೋಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಇದೇ ವೇಳೆ ತಕ್ಷಣ ರಾಜ್ಯ ಸರ್ಕಾರ ಅವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಕೆಲ ಹೊತ್ತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಇಂಡಿ-ಬಳ್ಳೋಳ್ಳಿ, ಬ್ಲಾಕ್ ಕಾಂಗ್ರೇಸ್ ನೇತೃತ್ವದಲ್ಲಿ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವೀದ ಮೊಮಿನ ಮಾತನಾಡಿ, ಚೆನ್ನಗೀರಿ ಶಾಸಕ ಕೆಎಸ್‌ಐಡಿಎಲ್ ಅದ್ಯಕ್ಷ ಮಾಡಳ ವಿರೂಪಾಕ್ಷ ಮತ್ತು ಅವರ ಪುತ್ರ ಪ್ರಶಾಂತ ಮಾಡಳ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದಿದ್ದು, ಇಡೀ ರಾಜ್ಯದ ಜನ ತಲೆ ತಗ್ಗಿಸುವತಾಗಿದೆ. ಈ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚಿಬಿದಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಬಂದ ದಿನದಿಂದ ಇಡೀ ಸಚಿವ ಸಂಪುಟಕ್ಕೆ ಹಗಲು ದರೋಡೆಗೆ ಇಳಿದಿದ್ದು, ಕಾಂಗ್ರೇಸ್ ಪಕ್ಷ ಇದನ್ನು ಬಲವಾಗಿ ಖಂಡಿಸುತ್ತೆವೆ ಎ0ದರು.
ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಕಚೇರಿ ಹಾಗೂ ಅವರ ಪುತ್ರ ಪ್ರಶಾಂತ ಅಧಿಕಾರಿಯಾಗಿದ್ದು, ಇಬ್ಬರ ಕಚೇರಿ ಮೇಲೆ ರೇಡ್ ಮಾಡಿದ್ದಾಗ ಶೇ. ೪೦ ೦ ರಷ್ಟು ಕಮಿಷನ್‌ದಂತೆ ೪೦ ಲಕ್ಷ ನಗದು ಸಾಕ್ಷಿ ಸಮೇತ ಸಿಕ್ಕಿದೆ. ಆದರೂ ಮುಖ್ಯಮಂತ್ರಿಗಳು ಹಾಗೂ ಕಾನೂನು ಮಂತ್ರಿಗಳು ಇವರನ್ನು ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಈಗಾಗಲೇ ಸಂಕಷ್ಟದಲ್ಲಿ ಮುಳುಗಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೇ ಕೇಂದ್ರ ಮತ್ತು ರಾಜ್ಯ ಸ ಸರ್ಕಾರ ಅಡುಗೆ ಅನಿಲ ದರವನ್ನು ೫೦ ಹಾಗೂ ವಾಣಿಜ್ಯ ಅನಿಲದ ಬೆಲೆಯನ್ನು ೩೫೦ ಏರಿಕೆ ಮಾಡಿದೆ. ಇದರಿಂದ ಜನ ಸಾಮನ್ಯರಿಗೆ, ಕಳೆದ ಒಂದು ವರ್ಷದಿಂದ ಸತತವಾಗಿ ಅಡುಗೆ ಅನಿಲ ದರ ಏರುತ್ತಿದೆ. ಅಚ್ಛೇದಿನ ಬರುತ್ತದೆ. ಅಂತ ಹೇಳಿದ ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡಿದೆ. ರಾಜ್ಯ ಸರ್ಕಾರ ಜನತೆಗೆ ಯಾವುದೇ ಮಾಹಿತಿ ನೀಡದೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಖಂಡನೀಯ ಎಂದರು.
ಬಳ್ಳೋಳ್ಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಪ್ರಶಾಂತ ಕಾಳೆ, ಬೀಮಣ್ಣ ಕೌಲಗಿ, ಜಟ್ಟೆಪ್ಪ ರವಳಿ, ಅಣ್ಣಪ್ಪ ಬೀದರಕೋಟಿ, ಶ್ರೀಕಾಂತ ಕೂಡಗನೂರ, ಸತೀಶ ಕುಂಬಾರ, ಮಂಜುನಾಥ ಕಾಮಗೊಂಡ, ರುಕ್ಕುದೀನ ತದೇವಾಡಿ, ಅವಿನಾಶ ಬಗಲಿ, ನಿರ್ಮಲ ತಳಕೇರಿ, ಶೈಲಜಾ ರಾಠೋಡ, ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ