ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಾಜಿ ಸಚಿವ ಎಂ ಆರ್ ಸೀತಾರಾಂರವರು ನನ್ನ ಕಷ್ಟದ ಸಮಯದಲ್ಲಿ ಕೇವಲ ಆತ್ಮ ಸ್ಥೈರ್ಯ ತುಂಬಿದ್ದು ಅಲ್ಲದೆ ನನಗೆ ಆರ್ಥಿಕ ಸಹಾಯ ಮಾಡಿ ರುವುದು ನಾನು ನನ್ನ ಪ್ರಾಣ ಇರುವತನಕ ಮರೆಯಲಾರೆ:ಶಾಸಕ ಆರ್.ನರೇಂದ್ರ

ಚಾಮರಾಜನಗರ: ಸಮುದಾಯ ಭವನಗಳನ್ನು ಪ್ರತಿಯೊಬ್ಬರೂ ಅವಶ್ಯಕವಾಗಿ ಉಪಯೋಗಿಸಿಕೊಳ್ಳಬೇಕು ,ಬಡವರು ಇಂದಿನ ದಿನಗಳಲ್ಲಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ಖರ್ಚುಮಾಡುವ ಸಾಮರ್ಥ್ಯವಿರುವುದಿಲ್ಲ ಅಂತಹ ಜನರು ಇದನ್ನು ಉಪಯೋಗಿಸಿಕೊಳ್ಳಬೇಕು ಹಾಗೂ ಯಾವ ವ್ಯಕ್ತಿ ಪ್ರಾಮಾಣಿಕ ದಕ್ಷ ಆಡಳಿತಗಾರರಾಗಿ ಸದಾ ಬಡವರ ಪರವಾಗಿ ಇರುವರೊ ಅಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಈ ಕ್ಷೇತ್ರದಲ್ಲಿ ನಿಮಗೆ ಆರ್ ನರೇಂದ್ರರ ರೂಪದಲ್ಲಿ ಸಿಕ್ಕಿದ್ದಾರೆ ಅದನ್ನು ನನ್ನ ಜನಾಂಗದವರು ಆಯ್ಕೆಮಾಡುವ ಮೂಲಕ ನನ್ನ ಗೌರವವನ್ನು ಎತ್ತಿ ಹಿಡಿದು ಕೈ ಬಲಪಡಿಸಬೇಕು ಎಂದು ಮಾಜಿ ಸಚಿವರಾದ ಎಮ್ ಆರ್ ಸೀತಾರಾಮ್ ತಿಳಿಸಿದರು .
ಹನೂರು ಸಮೀಪದ ಎಲ್ಲೆಮಾಳದಲ್ಲಿ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ )ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಶಾಸಕರು ಶಾಸಕರು ಮಾತನಾಡಿ ನನ್ನ ಕ್ಷೇತ್ರದಲ್ಲಿ ಸುಮಾರು154 ಸಮುದಾಯ ಭವನವನ್ನು ಉದ್ಘಾಟನೆ ಮಾಡಿದ್ದೆನಿ, ಅಲ್ಲದೆ ಮೂರು ಸಮುದಾಯ ಭವನಗಳಿಗೆ ಸೀತಾರಾಮ್ ರವರು ಅನುದಾನ ನೀಡಿದವರು ,ಪ್ರಜಾದ್ವನಿ ಯಾತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಡಿ ಕೆ ಶಿ ಯವರು ಸಹ ನಮ್ಮ ಕ್ಷೇತ್ರದ ಸಮುದಾಯಭವನವನ್ನು ನಿರ್ಮಾಣದ ಕೆಲಸವನ್ನು ಶ್ಲಾಘಿಸಿದರು , ಮತ್ತು ಮುಂದುವರಿದ ಕಾಮಗಾರಿಗಳಾದ ಅಡುಗೆ ಮನೆ ,ಸುತ್ತುಗೊಡೆ ,ಮೆಲ್ಗಡೆ ಕೊಠಡಿಗಳ ನಿರ್ಮಾಣ ಮಾಡಲು ನಾನು ಉತ್ಸಾಹಿಯಾಗಿದ್ದೆನೆ,ಮುಂದಿನ ದಿನಗಳಲ್ಲಿ ಮಾಡಲಾಗುವುದು , ಸಮುದಾಯ ಭವನಗಳು ಕೇವಲ ತೊರ್ಪಡಿಕೆಗೆ ಸೀ ಮಿತವಾಗಬಾರದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಈ ಸ್ಥಳವನ್ನು ಸದುಪಯೋಗ ಪಡಿಸಿಕೊಳ್ಳಲು ಮನವಿಯನ್ನು ಮಾಡಿದರು .
ಇದೇ ಸಂದರ್ಭದಲ್ಲಿ
ಸಂಘದ ಶಿಲಾನ್ಯಾಸ ಉದ್ಘಾಟಿಸಿ ಮಾತನಾಡಿದ ಎಂ .ಆರ್ ಸೀತರಾಮ್ ರವರು,ಆರು ವರ್ಷಗಳ ಹಿಂದೆ ನಾವು ಮಾಡಿದ ಕೆಲಸಕ್ಕೆ ಇಂದು ಲೋಕಾರ್ಪಣೆ ಮಾಡುತ್ತಿದ್ದೆನೆ ಆರ್ ನರೇಂದ್ರರವರ ಕಳೆದೆರಡು ಚುನಾವಣೆಯಲ್ಲಿ ನಾನು ಭಾಗವಹಿಸಿದ್ದೇನೆ ,ಸ್ಥಳಿಯವಾಗಿ ನಿಮಗೆ ಶಾಸಕರೆ ಮುಖ್ಯ ಎಲ್ಲೆಮಾಳ ,ಕು ಹೊಸೂರು ಭಾಗದಲ್ಲಿ ನಮ್ಮ ಸಮುದಾಯ ಜನಾಂಗದವರು ಹೆಚ್ಚು ಮತವನ್ನು ನೀಡಬೇಕು ಇವರು ಮಂತ್ರಿಯಾಗುತ್ತಿದ್ದಾರೆ ನಮ್ಮ ಸಿದ್ದರಾಮಯ್ಯ ನವರ ಸರ್ಕಾರ ಬರುತ್ತೆ ನೀವು ಮತ ನೀಡಿ ನೂರಕ್ಕೆ ನೂರು ಕೈಜೋಡಿಸಬೇಕೆಂದು ಮನವಿ ಮಾಡಿದರು ,ಪ್ರತಿ ಸಂಘಕ್ಕೂ ಸಂಘದ ಒಗ್ಗಟ್ಟು ಬಹುಮುಖ್ಯವಾಗಿದೆ ,ಎಲ್ಲಾ ಕಾರ್ಯಕ್ರಮವನ್ನು ಒಟ್ಟಾಗಿ ಮಾಡಿ ಅಲ್ಲದೆ ನೀವು ನಿಮಗೆ ನಿಷ್ಠಾವಂತ ರನ್ನು ಆಯ್ಕೆ ಮಾಡಿ ನಮ್ಮ ಸಮುದಾಯ ಋಣವನ್ನು ಗಿರಿಸುವ ಕೆಲಸ ಮಾಡಿ ಎಂದು ನಮ್ಮ ತಂದೆ ತಿಳಿಸಿದರು ,ಮುಂದಿನ ದಿನಗಳಲ್ಲಿ ನಢಯುವ ಚುನಾವಣಾ ಪ್ರಚಾರಕ್ಕೆ ನಾನು ಬರುತ್ತೇನೆ
ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅರಗು ಮತ್ತು ಉಕ್ಕು ನಿಗಮದ ಮಾಜಿ ಅಧ್ಯಕ್ಷರಾದ
ಹೆಚ್ ಎ ವೆಂಕಟೇಶ್ ಮಾತನಾಡಿ ಒಂದು ಮಗು ಹುಟ್ಟಾಗ ಉಸಿರು ಇರುತ್ತದೆ ಸತ್ತಾಗ ಹೆಸರು ಇರುತ್ತದೆ ಅದಕ್ಕೆ ಮತ್ತೊಂದು ಹೆಸರು ಎಮ್ ಎಸ್ ರಾಮಯ್ಯ ಅವರು ,ಬೆಂಗಳೂರಿನಲ್ಲಿ ಶಿಕ್ಷಣ ,ಕೈಗಾರಿಕೆ ,ಆರೋಗ್ಯ ,ಇನ್ನಿತರ ಎಲ್ಲಾ ಬೆಳವಣಿಗೆಗೆ ಅವರು ಕಾರಣರಾಗಿದ್ದಾರೆ ಮಲ್ಲೇಶ್ವರಂ ಕ್ಷೇತ್ರದದಲ್ಲಿ ಸತತವಾಗಿ ಗೆದ್ದಂತಹವರ ಏಕೈಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಮ್. ಆರ್ ಸಿತರಾಮ್ ಆಡಳಿತ ಭವನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದವರು ,ಯಾವ ವ್ಯಕ್ತಿ ಕೆಲಸ ಮಾಡುತ್ತಾನೆ ಅಂತವರಿಗೆ ಮತ ನೀಡಬೇಕು ,ಸಹಕಾರ ನೀಡಬೇಕು ನಿಮ್ಮ ಕ್ಷೇತ್ರದಲ್ಲಿ ನರೇಂದ್ರರವರು, ನೂರಾರು ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಈ ಕಟ್ಟಡ ಉಪಯೋಗಕ್ಕೆ ಬರಲಿ ಎಂದು ನಿರ್ಮಿಸಿರುವ ಕಟ್ಟಡಗಳು ಶುಭ ಕಾರ್ಯಗಳಿಗೆ ಬಳಕೆಯಾಗಲಿ ,ಇದಲ್ಲದೇ ಹನೂರು ಒಕ್ಕಲಿಗ ಸಮುದಾಯಕ್ಕೂ ಸಹ ಇಪ್ಪತ್ತು ಲಕ್ಷ ಹಣ ನೀಡಿದರು, ರಾಜ್ಯದಲ್ಲಿ ಐವತ್ತು ಕ್ಷೇತ್ರದ ಹಣೆಬರಹ ಬರೆಯುವಲ್ಲಿ ಎಮ್ ಆರ್ ಸಿತರಾಮ್ ಬರೆಯಬಲ್ಲರು , ನರೇಂದ್ರರಿಗೆ ಎಲ್ಲರೂ ಕೈಜೋಡಿಸಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಜಯಲಕ್ಷ್ಮಿ ನಾಗೇಶ್ , ಕು ಹೊಸೂರು ಊರುಗೌಡರು ಗಳಾದ ,ಸುರೇಶ್ ,ಪುಟ್ಟಮಾದಶೆಟ್ಟಿ , ಎಸ್ ಆರ್ ರಂಗಸ್ವಾಮಿ ,ಸೆಸ್ಕಂ ಉದ್ಯೋಗಿ ರಂಗಸ್ವಾಮಿ ,ಜನಾಂಗದ ಮುಖಂಡರು ,ನಟರಾಜು ,ಮಾದೆವ ಹೆಚ್. ಆರ್ ಗೋಪಾಲಕೃಷ್ಣ .ಮಂಜು, ಹಾಗೂ ಇನ್ನಿತರರು ಹಾಜರಿದ್ದರು .

ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ