ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ ಮಾಲಿಪಾಟೀಲ್ ರವರು ಜನರ ಹಿತ ಶಕ್ತಿಯನ್ನು ಕಾಪಾಡಲು ಬಿಜೆಪಿ ವಿಫಲವಾಗಿದೆ,ಬಿಜೆಪಿ ವಿರುದ್ಧ ಮಾತನಾಡುವ ಮೂಲಕ ರೈತರಿಗೆ ಉಪಯೋಗ ಆಗದ ಯೋಜನೆಗಳನ್ನು ರೂಪಿಸುವ ಮೂಲಕ ಬಿಜೆಪಿ ತಮ್ಮ ಸ್ವಾರ್ಥದ ರಾಜಕೀಯದಲ್ಲಿ ತೊಡಗಿದೆ,
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಡಿಗೆ ಅನಿಲ ದರ 50 ರೂ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ದರ 350 ರೂ ಗಳಿಗೆ ಏರಿಕೆ ಮಾಡಿದ್ದು ಬಡವರಿಗೆ ಜನಸಾಮಾನ್ಯರಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಕೋವಿಡ್ ಸಂಕಷ್ಟ ಸಮಯದಿಂದ ಜನರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕು ಸಂಕಷ್ಟಮಯವಾಗಿದೆ ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಜನತೆಯು ರೋಸಿ ಹೋಗಿದ್ದಾರೆ, ತುಂಗಭದ್ರಾ ಎಡದಂಡೆ ನಾಲೆಯ ವಿತರಣಾ ಕಾಲುವೆಗಳಿಗೆ ಆನ್ ಅಂಡ್ ಆಫ್ ನೀತಿಯಿಂದಾಗಿ ನೀರು ಪೂರೈಕೆಯನ್ನು ನಿಲ್ಲಿಸಲಾಗಿದ್ದೂ ಇದರಿಂದ ಭತ್ತ ಬೆಳೆಗೆ ತುಂಬಾ ತೊಂದರೆಯಾಗುತ್ತದೆ , ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು ಒಂದು ವೇಳೆ ರೈತರ ಬೆಳೆಗೆ ಹಾನಿಯಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ , ಬಿಜೆಪಿ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಭ್ರಷ್ಟಾಚಾರ, ದುರಾಡಳಿತವನ್ನು ವಿರೋಧಿಸಿ ನಮ್ಮ ನಾಯಕದೊಂದಿಗೆ ಚರ್ಚಿಸಿ ಹೋರಾಟ ಮಾಡಲಾಗುವುದು ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಾಕ್ಷರಾದ ವಿಶ್ವನಾಥ ಮಾಲಿಪಾಟೀಲ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.