ಬೆಳಗಾವಿ ಜಿಲ್ಲೆಯ ರಾಮದುರ್ಗ
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ…
ಹೌದು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಜನಸಾಮಾನ್ಯ ಹಿತ ರಕ್ಷಣಾ ಸಮಿತಿ ಹಾಗೂ ಶ್ರೀ ದುಗ್ಳೇ ದೇವದಾಸಿಮಯ್ಯ ಮಹಿಳಾ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿ ರಾಮದುರ್ಗ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಘದ ಕಾರ್ಯಕರ್ತರು ಈಗಾಗಲೇ ಸಾಕಷ್ಟು ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಹಾಗೂ ವಾಣಿಜ್ಯ ಬಳಿಕೆಯ ಸಿಲಿಂಡರ್ ಬೆಲೆ ರೂ.350.50 ಮತ್ತು ಗೃಹ ಬಳಕೆ ಸಿಲಿಂಡರ್ ರೂ.50 ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿದ್ದು ಇದರಿಂದ ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಲ್ಪಿಜಿ ದರ ಹೆಚ್ಚಳದಲ್ಲಿ ವಿಶ್ವದಲ್ಲಿಯೇ ಭಾರತ ಪ್ರಥಮ ಸ್ಥಾನ ಹಾಗೂ ಪೆಟ್ರೋಲ್ ದರ ಏರಿಕೆಯಲ್ಲಿ ವಿಶ್ವದಲ್ಲೇ ಭಾರತ ಮೂರನೇ ಸ್ಥಾನ ಹಾಗೂ ಪ್ರಪಂಚದ ಡೀಸೆಲ್ ದರ ಏರಿಕೆಯ ದೇಶಗಳಲ್ಲಿ ಭಾರತ ಎಂಟನೇ ಸ್ಥಾನ ಎಂಬ ಕುಖ್ಯಾತಿ ಹೊಂದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು , ಹಣ ದುಬ್ಬರ ಕಾಲದಲ್ಲಿ ಎಲ್ಪಿಜಿ ದರ ಏರಿಸುವುದು ಕೇಂದ್ರ ಸರಕಾರದ ಸೂಕ್ತ ಕ್ರಮವಲ್ಲ ಜಾಗತಿಕವಾಗಿ ಉದ್ಯೋಗ ನಷ್ಟ ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಈ ದಿನಗಳಲ್ಲಿ ಜನಸಾಮಾನ್ಯರು ವಿಶೇಷವಾಗಿ ಹೆಣ್ಣು ಮಕ್ಕಳು ಕುಟುಂಬದ ನಿರ್ವಹಣೆ ಮಾಡುವುದು ಸವಾಲಾಗಿ ಪರಣಮಿಸಿದೆ ಹೋಳಿ ಹಬ್ಬ ಹಾಗೂ ಯುಗಾದಿ ಹಬ್ಬಗಳು ಸಮೀಪದಲ್ಲಿದ್ದು ಗ್ಯಾಸ ದರ ಹೆಚ್ಚಳ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರ ಅತಿ ಶೀಘ್ರವಾಗಿ ಅಡುಗೆ ಅನಿಲ ದರವನ್ನು ಅರ್ಧದಷ್ಟು ಕಡಿಮೆ ಮಾಡಿ ಜನಸಾಮಾನ್ಯರ ಸಂಕಷ್ಟ ಸ್ಪಂದಿಸಬೇಕು ಎಂದು ಆಗ್ರಹಿಸಿದರು ಜನಸಾಮಾನ್ಯರ ಹಿತ ರಕ್ಷಣಾ ಸಮಿತಿ ಸಂಸ್ಥಾಪಕರಾದ ಈರಣ್ಣ ಕಲ್ಯಾಣಿ ಹಾಗೂ ಅಂಬರೀಶ್ ಅಂಬರೀಶ್ ಬಟಕುರ್ಕಿ ವೀರೇಶ ಬಳಿಗೆರೆ ವಿನಾಯಕ ನರಸಾಪುರ ಮಹದೇವ್ ಬರಡೂರ್ ಕೃಷ್ಣ ಬಟಕುರ್ಕಿ ಮಲ್ಲಿಕಾರ್ಜುನ ಬಲಕುಂದಿ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.