ಗದಗ:”ಸಂಭ್ರಮದ ಹೋಳಿ ” ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಚಿಣ್ಣರು ಸಂಭ್ರಮದಿಂದ ಹೋಳಿ ಹಬ್ಬ ಆಚರಣೆಯನ್ನು ಮಾಡಲಾಯಿತು. ವಿಶೇಷವೆಂದರೆ ಚಿಕ್ಕ ಮಕ್ಕಳಿಂದ ಮೊದಲಿಗೆ ಕಾಮಣ್ಣ ಪೂಜಾ ಕಾರ್ಯಕ್ರಮ ನೆರವೇರಿತು. ಸಂಭ್ರಮದಲ್ಲಿ ಸೇರಿದ್ದ ಚಿಣ್ಣರು “ಕಾಮಣ್ಣನ ಮಕ್ಕಳು, ಕಳ್ಳ ನನ್ನ ಮಕ್ಕಳು “ಎಂದು ಬೊಬ್ಬೆ ಹೊಡೆಯುತ್ತಾ ಕುಣಿದು ಕುಪ್ಪಳಿಸುವುದು ನೋಡುಗರಲ್ಲಿ ತಮ್ಮ ಬಾಲ್ಯದ ದಿನವನ್ನು ನೆನಪಿಸುವಂತಿತ್ತು.
ವರದಿ – ಸದಾಶಿವ ಭೀ ಎಂ



















