ಹಾನಗಲ್: ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ , ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಪಣತೊಟ್ಟು ಪ್ರತಿ ಜಿಲ್ಲೆಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರ ಪರವಾಗಿ ಪ್ರಚಾರ ಕೈಗೊಳ್ಳಲು ಶುರು ಮಾಡಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿಗೆ ಪ್ರ ಪ್ರಥಮವಾಗಿ ಮಾರ್ಚ್ ಆರರಂದು ಆಗಮಿಸಿದರು. ನಗರಕ್ಕೆ ಅವರು ಬರುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ನಗರದ ಪಿಲ್ಲಿಗಟ್ಟಿ ಹನುಮಪ್ಪ ದೇವಸ್ಥಾನದಿಂದ ಅದ್ದೂರಿಯಾಗಿ ಮುಖ್ಯ ರಸ್ತೆಯ ಮುಖಾಂತರ ಕಾರ್ಯಕರ್ತರು ಬರಮಾಡಿಕೊಂಡರು,ವಿವಿಧ ಮೇಳ ಗೊಂಬೆ ಕುಣಿತ ಡೊಳ್ಳಿನ ಮೇಳ ದಿಂದ ಮೆರವಣಿಗೆ ಮೂಲಕ ನಗರಕ್ಕೆ ಬರಮಾಡಿಕೊಂಡು ಹಾನಗಲ್ಲ ನಗರದ ಶ್ರೀ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಕನಕದಾಸರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಗಾಂಧಿ ವೃತದಲ್ಲಿ ಕಾರ್ಯಕರ್ತರು ಬೃಹದ್ದಾಾಕಾರದ ಶೇಬುಹಣ್ಣಿನ ಮಾಲೆ ಒಂದನ್ನು ಹಾಕುವ ಮೂಲಕ ಸ್ವಾಗತಿಸಿಕೊಂಡರು. ಅಲ್ಲಿಂದ ನೇರವಾಗಿ ನಗರದ ಗ್ರಾಮ ದೇವತೆಗೆ ಬಂದು ಪೂಜೆ ಸಲ್ಲಿಸಿದರು. ನಂತರ ಶ್ರೀ ಕುಮಾರೇಶ್ವರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹಾನಗಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಯುತ ಎಸ್ ಕೆ ಪಂಪಾಪತಿಯವರು,ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸನ್ಮಾನಿಸಿದರು.ವೇದಿಕೆಯಲ್ಲಿ ಉಪಸ್ತರಿಂದ ಸ್ವಾಮೀಜಿಯವರನ್ನು, ಗಣ್ಯ ವ್ಯಕ್ತಿಗಳನ್ನು, ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗಾಲಿ ಜನಾರ್ಧನ ರೆಡ್ಡಿ ಅವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಶ್ರಮಿಸಿದ ಕೇವಲ 20 ದಿನಗಳ ಕಾಲಾವಕಾಶಗಳನ್ನು ತೆಗೆದುಕೊಂಡು ಹಾನಗಲ್ ತಾಲೂಕಿನ ಪ್ರತಿಯೊಂದು ಹಳ್ಳಿಗಳನ್ನು ಓಡಾಡಿ ಪಕ್ಷ ಸಂಘಟನೆ ಮಾಡಿ ಇಂದು ಬೃಹತ್
ಸಮಾವೇಶವನ್ನು ಹಮ್ಮಿಕೊಂಡಿದ್ದ ಶ್ರೀ ಎಸ್ ಕೆ ಪಂಪಾಪತಿ ಅವರನ್ನು ಕೊಂಡಾಡಿದರು, ನಂತರ ತಮ್ಮ ರಾಜಕೀಯ ಅನುಭವವನ್ನು ಕಾರ್ಯಕರ್ತರಲ್ಲಿ ಹಂಚಿಕೊಂಡರು. ತಮ್ಮ ಪಕ್ಷದ ಪ್ರಣಾಳಿಕೆಗಳನ್ನು ಬಸವೇಶ್ವರ ಹೆಸರಿನಲ್ಲಿ ಘೋಷಿಸಲಾಗುವುದೆಂದು ತಿಳಿಸಿದರು. ರೈತರಿಗೆ ಒಂಬತ್ತು ಗಂಟೆ ಉಚಿತ ವಿದ್ಯುತ್ ಪೂರೈಸಲಾಗುವುದು, ಪ್ರತಿ ರೈತರಿಗೆ ವರ್ಷಕ್ಕೆ 15,000 ಮಂಜೂರು ಮಾಡಲಾಗುವುದೆಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ರೈತರಿಗೆ ಸರ್ಕಾರದಿಂದ ಬಿತ್ತನೆ ಬೀಜ ರಸಗೊಬ್ಬರವನ್ನು ಮನೆ ಮನೆಗೆ ಮುಟ್ಟಿಸಲಾಗುವುದೆಂದು ತಿಳಿಸಿದರು. ಹಾನಗಲ್ ನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಟಿಸಿ ಕೊಡುವದಾಗಿ ತಿಳಿಸಿದರು. ತಾಲೂಕಿನ ಪ್ರತಿಯೊಬ್ಬ ಮಹಿಳೆಯರು ವಲಸೆ ಹೋಗುವುದನ್ನು ತಪ್ಪಿಸಿ ಕೈಗಾರಿಕೆಗಳನ್ನು ನಿರ್ಮಿಸುತ್ತೇನೆ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಹಾನಗಲ್ ನಗರವನ್ನು ಮಾದರಿಯ ತಾಲೂಕನ್ನಾಗಿ ನಿರ್ಮಿಸುವುದಾಗಿ ಘೋಷಿಸಿದರು. ಇನ್ನು ಹಲವಾರು ಪ್ರಣಾಳಿಕೆಗಳನ್ನು ತಮ್ಮ ಮಾತಿನ ಮೂಲಕ ಘೋಷಿಸಿದರು. ಮತ್ತು ಹಾನಗಲ್ ತಾಲೂಕಿನ ಪ್ರತಿ ಹೋಬಳಿ ಮಟ್ಟದಲ್ಲಿ ಸಮಾವೇಶ ಮಾಡಲಾಗುವುದೆಂದು ತಿಳಿಸಿದರು.. ಕೊನೆಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ನಂತರ ಮಾಧ್ಯಮ ಮಿತ್ರರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ತೆರಳಿದರು ಅವರು ತಮ್ಮ ವಾಹನ ಬಳಿ ಬರುತ್ತಿದ್ದಂತೆ ಕಾರ್ಯಕರ್ತರು ಮುಗಿಬಿದ್ದು ಸೆಲ್ಫಿ ಫೋಟೋ ತೆಗೆದುಕೊಂಡು ಕಾರ್ಯಕರ್ತರನ್ನು ಖುಷಿಪಡಿಸಿ ತಮ್ಮ ಮುಂದಿನ ಪ್ರಯಾಣ ಬೆಳೆಸಿದರು .