ಮೈಸೂರು :- ಕಳೆದ ಎರಡು ದಿನಗಳಿಂದ ಮೈಸೂರು ಮಹಾನಗರ ಪಾಲಿಕೆ ಮುಂದೆ ಧರಣಿ ನಡೆಸುತ್ತಿರುವ ಪೌರಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ |ಕರ್ನಾಟಕ ಪ್ರಜಾ ಪಾರ್ಟಿ| “ರಾಜ್ಯಾಧ್ಯಕ್ಷ” [ಡಾ. ಬಿ, ಶಿವಣ್ಣ]
ಸಾಂಸ್ಕೃತಿಕ ನಗರಿ ಹಾಗೂ ಸ್ವಚ್ಛ ನಗರಿ ಖ್ಯಾತಿಯ ಮೈಸೂರು ಗಬ್ಬೆದ್ದು ಹೋಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ.
ಇದಕ್ಕೆ ಕಾರಣ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಶನಿವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತಿರುವುದು,
ನೊಂದ ಪೌರ ಕಾರ್ಮಿಕರುಗಳಿಗೆ ನೇರ ವೇತನ ಪಾವತಿ ಮಾಡಬೇಕು ಹಾಗೂ ಹೆಚ್ಚುವರಿ 1680 ಮಂದಿ ಪೌರಕಾರ್ಮಿಕರನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿ ಮಾಹಾನಗರ ಪಾಲಿಕೆ ಮುಂಭಾಗ ಬಿರು ಬಿಸಿಲಿನಲ್ಲೇ ಇವರುಗಳು ಪ್ರತಿಭಟನೆ ಮಾಡುತ್ತಿರುವುದು ತಿಳಿದ ಕೂಡಲೇ,
ಈ ಪೌರಕಾರ್ಮಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯಾಧ್ಯಕ್ಷ ಶಿವಣ್ಣ ಮತ್ತು ಕರ್ನಾಟಕ ಪ್ರಜಾ ಪಾರ್ಟಿ ಯ ಕೃಷ್ಣ ರಾಜ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾದ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಕೆ,ಪಿ,ಪಿ, ಯ ಮುಖಾಂಡರಾದ ನಾಗರಾಜ್ ಕಲ್ಲಹಳ್ಳಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನೂರಾರು ಮಂದಿ ಮುಷ್ಕರ ನಿರತರಾಗಿದ್ದಾರೆ, ಆದರೆ ಮೇಯರ್ ಆಗಲಿ,ಆಯುಕ್ತರಾಗಲೀ ಸ್ಥಳಿಯ ಶಾಸಕರಾದ ರಾಮದಾಸ್ ರವರಾಗಲಿ ಕಷ್ಟಗಳನ್ನು ಅಲಿಸಿಲ್ಲ ನಮಗಿಂತ ಕಡಿಮೆ ವರ್ಷ ಕೆಲಸ ಮಾಡಿದವರಿಗೆ ಕಾಯಂ ಮಾಡಲಾಗಿದೆ,
ಆದರೆ ನಮ್ಮನ್ನು ಹದಿನೈದು ವರ್ಷಗಳಿಂದ ದುಡಿಸಿಕೊಂಡು ಕಾಯಂ ಏಕೆ ಮಾಡುತ್ತಿಲ್ಲ,
ನಮಗೆ ಅನ್ಯಾಯವಾಗಿದೆ ಎಂದು ಶಿವಣ್ಣ ನವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು,
ಶಿವಣ್ಣ ನವರು ಮಾತನಾಡಿದ ನಿಮ್ಮ ಹೋರಾಟಕ್ಕೆ ನಮ್ಮ ಕರ್ನಾಟಕ ಪ್ರಜಾ ಪಾರ್ಟಿ ಯಿಂದ ಸಂಪೂರ್ಣ ಬೆಂಬಲವಿದೆ ಯಾವುದೇ ರೀತಿಯ ಹೋರಾಟಕ್ಕೂ ನಿಮ್ಮ ಜೊತೆಯಲ್ಲಿ ನಿಲ್ಲುತ್ತೇವೆ,
ಮುಖ್ಯಮಂತ್ರಿಗಳು ನಾಳೆ ಮೈಸೂರಿಗೆ ಬರುತ್ತಿದ್ದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿದರು,