ವಿಜಯಪುರ/ಇಂಡಿ:ಬರುವ ಚುನಾವಣೆಯಲ್ಲಿ ದಲಿತರು ಅಂಬೇಡ್ಕರ ಅವರು ನೀಡಿದ ಮತದಾನದ ಹಕ್ಕನ್ನು ಪ್ರಾಮಾಣಿಕವಾಗಿ ಉಪಯೋಗಿಸಬೇಕು. ಹಣ,ಹೆಂಡ,ಆಮಿಷಕ್ಕೆ ಒಳಗಾಗಬಾರದು ನಿಮ್ಮ ಮೇಲೆ ಕಳಕಳಿ ಇರುವ ವ್ಯಕ್ತಿ ಯಾವುದೇ ಪಕ್ಷದವನಿದ್ದರೂ ನಿಮಗೆ ಬೇಕಾದ ವ್ಯಕ್ತಿಗೆ ಮತ ನೀಡಬೇಕು ಎಂದು ಇಂಡಿ ಉಪ ವಿಭಾಗ ಮಟ್ಟದ ಎಸ್ಸಿ,ಎಸ್ಟಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಾನಂದ ಮೂರಮಾನ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಚುನಾವಣೆ ಸಮೀಪ ಬಂದಾಗ ದಲಿತ ಮುಖಂಡರು ನಿಮ್ಮ ಕೆರಿ,ಓಣಿಗಳಿಗೆ ಬರುತ್ತಾರೆ.ನಿಮ್ಮನ್ನೆಲ್ಲ ಮುಂದಿಟ್ಟುಕೊಂಡು ಅವರು
ದೊಡ್ಡವರಾಗುತ್ತಾರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುವುದಿಲ್ಲ.ನೀವು ಮತ ಚಲಾಯಿಸುವ ಉದ್ದೇಶ ಹೊಂದಿದ ಯಾವುದೇ ಪಕ್ಷದ ಮುಖಂಡನಿಗೆ ನೀವೇ ನೇರವಾಗಿ ಭೇಟಿಯಾಗಿ ನಿಮ್ಮ ಸಮಸ್ಯೆ ಹೇಳಿ ಮತದಾನ ಮಾಡಬೇಕು.ದಲಿತ ಮುಖಂಡರೆನಿಸಿಕೊಳ್ಳುವವರು ನನ್ನ ಹಿಂದೆ ದಲಿತರು ಇದ್ದಾರೆ ಎಂದು ನಿಮ್ಮನ್ನು ಮುಂದೆ ಇಟ್ಟು ಕೊಂಡು ನಾಯಕರಾಗಿ ಸಮಾಜಕ್ಕೆ ಏನು ಕೊಡುಗೆ ನೀಡದೆ, ಗುತ್ತಿಗೆ ಕೆಲಸ,ಕಾರ್ಯ, ಎಲ್ಲವನ್ನೂ ತಾವೇ ಮಾಡಿಕೊಳ್ಳುತ್ತಾರೆ ಹೀಗಾಗಿ ದಲಿತ ಸಮುದಾಯದ ಪ್ರತಿಯೊಬ್ಬರು ಸ್ವಾಭಿಮಾನದ ನಿಮ್ಮ ಮತದಾನ ಹಕ್ಕನ್ನು ನೀವೇ ತಿಳಿದುಕೊಂಡು ನಿಮ್ಮ ಬಗ್ಗೆ ಕಾಳಜಿ ಹೊಂದಿದ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.ಮುಂಬರುವ ದಿನದಲ್ಲಿ ಇಂಡಿ ತಾಲೂಕಿಗ 84 ಗ್ರಾಮಗಳ ದಲಿತರ ಓಣಿಗಳಿಗೆ ಭೇಟಿ ನೀಡಿ ಮತದಾನದ ಮಹತ್ವ ಕುರಿತು ಮತದಾನ ಜಾಗೃತಿ ಸಭೆಗಳನ್ನು ಮಾಡಲಾಗುತ್ತದೆ, ಎಂದು ಹೇಳಿದರು.
ಈ ಒಂದು ಸಂದರ್ಭದಲ್ಲಿ
ಪೀರಪ್ಪ ಕಟ್ಟಿಮನಿ.ಕುಮಾರ ನಿಂಬರಗಿ,ಸುನೀಲ ಬನಸೋಡೆ .ಕುಲಪ್ಪ ವಠಾರ ಸಂತೋಷ ಮೇಲಿನಕೇರಿ,ಯೋಗೇಶ ಸೇರಖಾನ ನಾಗೇಶ್ ತಳಕೇರಿ,ಜಿತೇಂದ್ರ ಕಟ್ಟಿಮನಿ,ರಾಜು ಕಾಲೇಬಾಗ ಮೊದಲಾದವರು ಈ ಸ೦ದರ್ಭದಲ್ಲಿ ಇದ್ದರು.
ವರದಿ:ಅರವಿಂದ್ ಕಾಂಬಳೆ