ಬೀದರ್/ಔರಾದ:ಹೋಳಿ ಹಬ್ಬವನ್ನು ಎಲ್ಲರೂ ಅತ್ಯಂತ ಆನಂದದಿಂದ ಆಚರಣೆ ಮಾಡುವ ಪದ್ದತಿ ನಮ್ಮಲ್ಲಿದೆ.ವಿವಿಧ ಬಣ್ಣಗಳಿಂದ ರಂಗಿನಾಟ ಆಡುವುದು ಎಲ್ಲಾ ಕಡೆ ಸರ್ವೇ ಸಾಮಾನ್ಯ ಎಂದು ಹೇಳಬಹುದು
ಆದ್ರೆ ಯನಗುಂದಲ್ಲಿ ಮಾತ್ರ ಹೋಳಿ ಹಬ್ಬ ಬಹಳ ವಿಭಿನ್ನವಾಗಿ ನಡೆದಿದೆ ಮಕ್ಕಳಿಗೆ ಕೆಸರು ಸ್ನಾನ ಮಾಡಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು.
ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನೈಸರ್ಗಿಕ ಚಿಕಿತ್ಸೆಗಳಲ್ಲಿ ಒಂದಾಗಿರುವ ಮಡಬಾತ್ ಕೆಸರು ಸ್ನಾನ ಕಾರ್ಯಕ್ರಮ ಗ್ರಾಮದ ನಾಟಿ ವೈದ್ಯರಾಗಿರುವ ಬಸವರಾಜ ಘೂಳೆ ಅವರ ಹೊಲದಲ್ಲಿ ಹಮ್ಮಿಕೊಳಲಾಯಿತು ಮಕ್ಕಳು ಬಹಳ ಉತ್ಸಹ ಉಲ್ಲಾಸದಿಂದ ಕೆಸರು ಸ್ನಾನ ಮಾಡಿ ಕುಣಿದು ಕುಪ್ಪಳಿಸಿದರು ಸಂತೋಷ ಮುಸ್ತಾಪೂರೆ ಅವರ ನೇತೃತ್ವದಲ್ಲಿ ಮಕ್ಕಳೆಲ್ಲಾ ನಿಗದಿತ ಸಮಯಕ್ಕೆ ಬಸವರಾಜ ಘುಳೆಯವರ ಹೊಲಕ್ಕೆ ಆಗಮಿಸಿ ಕಸರಿನ ಸ್ನಾನದಲ್ಲಿ ಪಾಲ್ಗೊಂಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ಯಾಮಸುಂದರ,ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ ಟಂಕಸಾಲೆಯ,ಪ್ರಶಾಂತ ಪಾಟಿಲ,ಬಸವರಾಜ ಘುಳೆ,ಹಾಗೂ ಗುತ್ತಿಗೆದಾರ ಶಿವಕಾಂತ ಮಜಿಗೆ,ಚಂದು ಪಾಟಿಲ ಇನ್ನಿತರರು ಭಾಗಿಯಾಗಿದ್ದರು.
ವರದಿ:ಅಮರ ಮುಕ್ತೆದಾರ