ಹನೂರು :-ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ವಾಹಿನಿ ವಾಹನವು ಗ್ರಾಮ ಪಂಚಾಯಿತಿಯಿಂದ ಸುಮಾರು ಅರ್ಧ ಕಿ.ಮೀ. ದೂರದ ಬೀದಿಯಲ್ಲಿ ಕೆಟ್ಟು ನಿಂತು 10 ದಿನವಾದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಜನ ಸಾಮಾನ್ಯರ ತೆರಿಗೆ ಹಣದಲ್ಲಿ ಖರೀದಿಸಿ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಗ್ರಾಮ ಹಾಗೂ ಜನರ ಅರೋಗ್ಯ ಹಾಗೂ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರು ನೀಡಿರುವ ಯೋಜನೆಯನ್ನು ಲೆಕ್ಕಿಸದೆ ಅಜ್ಜಿಪುರ ಗ್ರಾಮ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಅಲ್ಲಿದ್ದಂತಹ ಸ್ಥಳೀಯರು ಆರೋಪಿಸಿದ್ದಾರೆ.
ನಂತರ ನಂದೀಶ್ ಪಿ.ಡಿ.ಓ ರವರು
ಸ್ವಚ್ಛವಾಹಿನಿ ವಾಹನದ ಬ್ಯಾಟರಿ ತೊಂದರೆಯಾಗಿತ್ತು ಹಾಗಾಗಿ ನಾಲ್ಕು ದಿನದಿಂದ ಅಲ್ಲೇ ನಿಂತಿದೆ ಬ್ಯಾಟರಿಯನ್ನು ರೆಡಿ ಮಾಡಲು ಕೊಟ್ಟಿದ್ದೇವೆ ಎಂದು ಹೇಳಿ ಬೇಜವಾಬ್ದಾರಿ ಉತ್ತರ ಕೊಟ್ಟು ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ.
ಸ್ವಚ್ಛ ವಾಹಿನಿ ವಾಹನಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಹಾಗೂ ಹಲವು ಕಡೆ ಪಂಚಾಯತ್ ಗೆ ಸೇರಿದ ನೌಕರರು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುವುದರ ಬಗ್ಗೆ ಸಂಬಂಧ ಪಟ್ಟ ಅದಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಹೇಳಿಕೊಂಡರು.
ವರದಿ:ಉಸ್ಮಾನ್ ಖಾನ್