ಕೊಪ್ಪಳ:ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಹಾಗೂ ಮಹಿಳಾ ದ್ವನಿ ಸಂಸ್ಥೆ (ರಿ.) ಕೊಡಮಾಡುವ ಮಹಿಳಾ ಸಾಧಕರು- 2022-23 ಕಾರ್ಯಕ್ರಮದಡಿ ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ‘ಮಹಿಳಾ ಸಾಧಕರ ಪ್ರಶಸ್ತಿ’ ನೀಡಿ ಗೌರವಿಸಿದೆ.
ಇವರು ಸುಮಾರು 12 ವರ್ಷಗಳ ಕಾಲ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಕೇಂದ್ರ ಕೊಪ್ಪಳ,ಯಲಬುರ್ಗಾ ತಾಲೂಕ ಅನುಷ್ಠಾನ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸಮಾಜದ ಅನಿಷ್ಟ ಪದ್ದತಿಯಾದ ದೇವದಾಸಿ ಪದ್ಧತಿ ಒಳಪಟ್ಟು ವಿಮುಕ್ತಗೊಂಡ ದೇವದಾಸಿ ಮಹಿಳೆಯರಿಗೆ ಸಕಾ೯ರದಿಂದ ದೊರೆಯುವ ಸೌಲಭ್ಯಗಳು ತಲುಪಿಸುವುದು.
ಜಾಗೃತಿ ಮೂಡಿಸುವುದು,ದೇವದಾಸಿ ಮಹಿಳೆಯರನ್ನು ಶೋಷಣೆ ಮಾಡದಂತೆ, ಅವರ ಹಿತರಕ್ಷಣೆ ಮಾಡುವುದರ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ.
