ಯಾದಗಿರಿ:ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಶ್ರೀ ಸ್ವಯಂಭೂ ಸೋಮೇಶ್ವರ ಶ್ರೀ ಸಂಗಮೇಶ್ವರ ಏವೂರ್ ಶಾಸನಗಳ ಸಂಸ್ಕೃತಿಕ ಅಧ್ಯಯನ ಪುಸ್ತಕ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯರಾದ ಶರಣಗೌಡ ಪಾಟೀಲ್ ಮತ್ತು ಮಲ್ಲನಗೌಡ ಪಾಟೀಲ್ ಮಾತನಾಡಿದರು ಭಾಸ್ಕರ್ ರಾವ್ ಮುಡಬುಳ್ ಸಾಹಿತಿಗಳು ನಿಂಗನಗೌಡ ದೇಸಾಯಿ ಪರನಹಳ್ಳಿ ಸಂಶೋಧಕರು ಕೆಂಭಾವಿ ಲೋಕೇಶ್ ಕೃಷಿ ಕುಲಸಚಿವರು ಶಿವಮೊಗ್ಗ ಇವರು ಪಾಲ್ಗೊಂಡಿದ್ದರು.
ಸ್ವಯಂಭೂ ಸೋಮೇಶ್ವರ ದೇವಾಲಯದ ಆವರಣದಲ್ಲಿ ಇರುವ ಈ ಸ್ಮಾರಕ ಪ್ರಸ್ತುತ ದಿನಗಳಲ್ಲಿ ಉಗ್ರಾಣವೆಂದು ತರೆಯಲಾಗುತ್ತದೆ ಎಂದು ಹೇಳಿದರು.
ಇದೊಂದು ಪ್ರಾಚೀನ ಮಠ ಮತ್ತು ಪಾಠ ಶಾಲೆಯಾಗಿತ್ತು.
ಸೋಮೇಶ್ವರ ದೇವಾಲಯವು ಸಾವಿರಾರು ವರ್ಷದ ಹಳೆಯದಾದ ದೇವಸ್ಥಾನವು ಇಂದು ಈ ಏವೂರ ಊರಿನ ಗ್ರಾಮದಲ್ಲಿ ನೋಡಲು ಇಂತಹ ದೇವಸ್ಥಾನ ಸಿಗೋದು ಅಪರೂಪ ಇಲ್ಲಿರುವ ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವಸ್ಥಾನ ಒಳಗಡೆ ಪ್ರವೇಶ ಮಾಡಿ ದೇವಸ್ಥಾನಗಳಲ್ಲಿ ದರ್ಶನ ಮಾಡಿ ಸರ್ವರೋಗಕ್ಕೂ ಇಲ್ಲಿ ನಿವಾರಣೆಗೆ ಯಾಗುತ್ತದೆ. ಎಂದು ಇಲ್ಲಿನ ಗ್ರಾಮಸ್ಥರು ನಂಬಿಕೆ ಯಾಗಿದೆ ಶಾಸನದಲ್ಲಿ ಕೂಡ ಉಲ್ಲೇಖವಿದೆ.
ಈ ಪುಸ್ತಕ ಅಧ್ಯಯನದಲ್ಲಿ ಮೂಲಕ ಹನುಮಕ್ಷಿ ಗೋಗಿ ಯವರು ಮಾತನಾಡಿದರು.
ಶ್ರೀ ಸ್ವಯಂಭೂ ಸೋಮೇಶ್ವರ ಶ್ರೀ ಸಂಗಮೇಶ್ವರ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಜನತೆಗೆ ಹಾರ್ದಿಕ ಸ್ವಾಗತ
ಭಕ್ತ ಮಂಡಳಿ ಹಾಗೂ ಏವೂರ ಗ್ರಾಮದ ಸಮಸ್ತ ನಾಗರಿಕರಿಗೂ ಮತ್ತು ಸದ್ಭಕ್ತಮಂಡಳಿ ಪುರಾಣ ಪ್ರವಚನ ಸರ್ವರಿಗೂ ಸುಸ್ವಾಗತ ಎಂದು ಮಲ್ಲನಗೌಡ ಪಾಟೀಲ್ ತಿಳಿಸಿದರು.
ವರದಿರಾಜಶೇಖರ ಮಾಲಿ ಪಾಟೀಲ್ ಶಹಾಪುರ*