ಔರಾದ : ಮೊನ್ನೆ ನಾಗಮಾರಪಳ್ಳಿ ಗ್ರಾಮಕ್ಕೆ ಜೆಡಿಎಸ್ ಮುಖಂಡ ಜೈಸಿಂಗ ರಾಠೋಡ ಗ್ರಾಮ ಸಂಚಾರ ಮಾಡಲು ಬಂದಾಗ ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಪ್ರಯುಕ್ತ ಅತಿಥಿಗೆ ಆತಿಥ್ಯ ನೀಡಿದೆ ಆದರೆ ಕೆಲ ವ್ಯಕ್ತಿಗಳು ನಾನು ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದೇನೆ ಎಂದು ವಾಟ್ಸಾಪ್ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಂಗಪ್ಪ ಘಾಟೆ ಸ್ಪಷ್ಟ ಪಡಿಸಿದ್ದಾರೆ.
ಗ್ರಾಮ ಸಂಚಾರ ವೇಳೆ ಮನೆಗೆ ಬಂದ ಅತಿಥಿಗೆ ಆತಿಥ್ಯ ನೀಡುವುದು ನಮ್ಮ ಕರ್ತವ್ಯ, ಅದು ಯಾರೆ ಇರಲಿ ಮನೆ ನಡೆದು ಬಂದಾಗ ಅತಿಥಿ ಸತ್ಕಾರ ಮಾಡುವುದು ನಮ್ಮ ಸಂಸ್ಕೃತಿ ಅದನ್ನು ಮಾತ್ರ ನಾನು ಮಾಡಿದ್ದು, ಸುಮ್ಮನೆ ವಾಟ್ಸಾಪ್ ಮೂಲಕ ನಾನು ಜೆಡಿಎಸ್ ಸೇರ್ಪಡೆ ಆಗಿದ್ದೇನೆ ಎಂದು ಇಲ್ಲ ಸಲ್ಲದ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ. ನಾನು ಯಾವುದೇ ಪಕ್ಷ ಸೇರಿಲ್ಲ ಜನಸೇವೆ ಜನಾರ್ದನ ಸೇವೆ ಎಂದು ನಂಬಿರುವೆ
ಈ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಇಂತಹ ಸುಳ್ಳು ಸುದ್ದಿ ಸೃಷ್ಟಿಸಿರುವವರ ವಿರುದ್ಧ ಮತ್ತು ಇಂತಹ ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವೆ, ಕಿಡಿಗೇಡಿಗಳು ಸೃಷ್ಟಿಸಿರುವ ಇಂತಹ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಮುಖಂಡ ಸಂಗಪ್ಪ ಘಾಟೆ ಕೋರಿದ್ದಾರೆ.