ಹನೂರು :- ತಾಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯಿತಿಯ ಚಿತ್ತಾಪುರ ಗ್ರಾಮದ ಹಲವಾರು ಕಾಲೋನಿಗಳಲ್ಲಿ ಕೇಂದ್ರ ಸರಕಾರದ ಜಲಜೀವನ್ ಯೋಜನೆ ಅಡಿಯಲ್ಲಿ ದೇಶದ ಪ್ರತಿ ಮನೆ ಮನೆಗೂ ಶುದ್ಧ ಗಂಗೆ ನೀರು ಕೊಡುವ ಸಲುವಾಗಿ ದೇಶದದ್ಯಾoತ ಕಾಮಗಾರಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.. ಆದರೇ ಇದನ್ನು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆ ದುರುಪಯೋಗ ಪಡಿಸಿಕೊಂಡು ಕಾಮಗಾರಿ ಪೂರ್ಣ ಮಾಡದೇ ಎಲ್ಲೆಂದರಲ್ಲಿ ಹಳ್ಳ ತೋಡಿ ಪೈಪ್ಗಳನ್ನು ಮುಚ್ಚದೆ ಬಿಟ್ಟಿರುವದು ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ.ಬಿದಿಗಳಲ್ಲಿ ಚಿಕ್ಕ ಮಕ್ಕಳು ವಯಸ್ಸಾದ ವೃದ್ಧರು ನಡೆದು ಬರುತ್ತಾರೆ ಕತ್ತಲೆ ಸಮಯದಲ್ಲಿ ನಡೆದಾಡುವುದು ಕಷ್ಟವಾಗಿದೆ ಏನಾದರೂ ರಾತ್ರಿ ಸಮಯದಲ್ಲಿ ಗುಂಡಿಗೆ ಬಿದ್ದು ಅನಾಹುತ ಆದರೇ ಯಾರು ಹೊಣೆಯಾಗುತ್ತರೆ. ನಮ್ಮ ಗ್ರಾಮದ ಪಂಚಾಯತ್ ಅಧಿಕಾರಿಗಳು ಸದಸ್ಯರುಗಳು ಕೂಡ ಇದರ ಬಗ್ಗೆ ಗಮನಹರಿಸದೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಚಿತ್ತಾಪುರ ಗ್ರಾಮದ ಮಹಿಳೆಯರು ವೃದ್ಧರು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇದಕ್ಕೆ ಸಂಬಂಧ ಪಟ್ಟ ಕಾಮಗಾರಿಯ ಗುತ್ತಿಗೆದಾರರು ಹಾಗೂ ಇಂಜಿನಿಯರ್ ರವರು ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಮನವಿ ಮಾಡಿದ್ದಾರೆ..
ವರದಿ :ಉಸ್ಮಾನ್ ಖಾನ್.