ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕೂಡು ಕುಟುಂಬದಿಂದ ತೃಪ್ತಿ ಮಹಿಳೆಯ ಜೀವನದ ಸಾರ್ಥಕತೆ- ಡಾ. ಶಾಂತಾ ಭಟ್

ದಾವಣಗೆರೆ:- ಮಾ28. ವಾಸ್ತವವಾಗಿ ಹಣದ ಅಮಿಷಕ್ಕೆ ಒಳಗಾಗಿ, ಉನ್ನತ ಹುದ್ದೆಗಳ ನಿರೀಕ್ಷೆ, ಹೊರ ದೇಶಗಳಿಗೆ ಹೋಗುವ ಭರಾಟೆಯಲ್ಲಿ ಕೂಡು ಕುಟುಂಬದ ಸಂಸ್ಕಾರ, ಸಂಸ್ಕೃತಿ ಮಾನವೀಯ ಮೌಲ್ಯಗಳ ಸಂಬಂಧಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ.
ಈ ಆಧುನಿಕ ತಂತ್ರಜ್ಞಾನದ ಅನುಕರಣೆಯಿಂದ ನಮ್ಮ ಕುಟುಂಬಗಳ ಮುಂದಿನ ಪೀಳಿಗೆಗಳಿಗೆ ಮಾರಕವಾಗುತ್ತದೆ. ಸಾಮಾಜಿಕ ಕಾಳಜಿಯ ಸಮಾಜ ಸೇವೆಯೊಂದಿಗೆ ಕೂಡು ಕುಟುಂಬದ ತೃಪ್ತಿ ಮಹಿಳೆಯರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ನಗರದ ಸ್ತ್ರೀ
ರೋಗ ತಜ್ಞರು, ಹಿರಿಯ ಪರಿಸರ ವಾದಿ ಡಾ|| ಶಾಂತಾ ಭಟ್ ತಮ್ಮ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಿದರು.
ದಾವಣಗೆರೆಯ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ನಗರದ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ “ದಾವಣಗೆರೆಯ ಗೃಹಿಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಪರ್ಧೆಗಳ ತೀರ್ಪುಗಾರರಾಗಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೊಬ್ಬ ಮುಖ್ಯ ಅತಿಥಿಗಳಾದ ಅಂತರಾಷ್ಟ್ರೀಯ ಕ್ರೀಡಾಪಟು
‘ಏಕಲವ್ಯ’ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶಿವಮೊಗ್ಗ ಪೊಲೀಸ್ ಇಲಾಖೆಯ ಪಿ.ಎಸ್.ಐ. ಶ್ರೀಮತಿ ಕೆ.ಎಸ್.ಶೈಲಜಾರವರು ಮಾತನಾಡಿ ಕಾನೂನುಗಳ ಸಾರಿಗೆ ನಿಯಮಗಳ ಅರಿವನ್ನು ಮಕ್ಕಳಲ್ಲಿ ಮೂಡಿಸಿ ಜಾಗೃತಿಗೊಳಿಸುವ ಜವಾಬ್ದಾರಿ ಪೋಷಕರದ್ದು.
ಇತ್ತೀಚಿನ ದಿನಮಾನಗಳಲ್ಲಿ ಕೆಲವು ಪೋಷಕರು ಚಿಕ್ಕ ಚಿಕ್ಕ ಮಕ್ಕಳಿಗೆ ವಾಹನ ಚಲಾಯಿಸುವ ಮೇರೆ ಮೀರಿದ ಭರವಸೆ ಕೆಲವು ಅಪಘಾತಕ್ಕೆ ಪೂರಕವಗುತ್ತದೆ. ಈ ನಿಟ್ಟಿನಲ್ಲಿ ೧೮ ವರ್ಷದ ಒಳಗಿನ ಮಕ್ಕಳಿಗೆ ಚಾಲನೆ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದಾಗ ಅದರ ಶಿಕ್ಷೆ ಪೋಷಕರಿಗೆ ಎಂದು ಕಾನೂನು ಶಿಸ್ತಿನ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಏಜು ಏಷ್ಯಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರೂ ಹಿರಿಯ ಶಿಕ್ಷಕಿ ಶ್ರೀಮತಿ ನೀಲಮ್ಮ ಸಂಗನಬಸಪ್ಪ ಮಾಗಾನಹಳ್ಳಿಯವರು ಮಾತನಾಡಿ “ ಮಹಿಳೆಯರು ಜೀವನದ ಕಷ್ಟ ಕಾರ್ಪಣ್ಯಗಳನ್ನು ತಾಳ್ಮೆಯಿಂದ ಎದುರಿಸಿ ಕೆಚ್ಚೆದೆಯಿಂದ ಧೈರ್ಯವಾಗಿ ಮುನ್ನಡೆದರೆ ಸಾಧನೆಗಳ ಹಾದಿ ಸುಗಮವಾಗುತ್ತದೆ. ಈ ಹಂತದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲತೆಯಿಂದ ನಿರಂತರ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಪರಂಪರೆಗಳ ಅರಿವು ಮೂಡಿಸಿ ಮೂಲೆಗುಂಪಾಗುತ್ತಿರುವ ಮಹಿಳೆಯರಿಗೆ ಮುಕ್ತವಾದ, ಸೂಕ್ತವಾದ ವೇದಿಕೆ ಕಲ್ಪಿಸಿ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ
ಈ ಕಲಾಕುಂಚದ ಸಾಧನೆ ಶ್ಲಾಘನೀಯ ಎಂದರು.
ಶ್ರೀಮತಿ ಜಯಲಕ್ಷ್ಮೀ ಮಲ್ಲನಗೌಡ್ರು, ಶ್ರೀಮತಿ ಉಮಾ ನಾಗರಾಜ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶ್ರೀಮತಿ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ದಾವಣಗೆರೆಯ ಗೃಹಿಣ ಸ್ಪರ್ಧೆ ವಿಜೇತರಿಗೆ ಮತ್ತು ಚಾಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ಪ್ರತೀ ವರ್ಷದಂತೆ ಹಮ್ಮಿಕೊಳ್ಳಲಾದ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿ ಸ್ಪರ್ಧೆಯ ವಿಜೇತರಿಗೆ ಶುಭ ಹಾರೈಸಿದರು.
ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ್, ಶ್ರೀಮತಿ ಪರ್ವಿನ್ ಅಮೀರ್‌ಜಾನ್, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಯಕ್ರಮ ನಿರೂಪಿಸಿದ ಶ್ರೀಮತಿ ಶೈಲಾ ವಿನೋದ್ ದೇವರಾಜ್ ರವರು ಕೊನೆಯಲ್ಲಿ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ