ಹನೂರು :ಕಾಡಿನಿಂದ ಆಹಾರ ಅರಸಿ ಬಂದ ಚಿರತೆ ದಾಳಿಗೆ ಎರಡು ವರ್ಷದ ಕರು ಬಲಿಯಾಗಿರುವ ಘಟನೆ ಚಿಗತಾಪುರ ಗ್ರಾಮದಲ್ಲಿ ನಡೆದಿದ್ದು.
ಗ್ರಾಮಸ್ಥರು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ಧಾರಿಗೆ ಸಾರ್ವಜನಿಕರು ಭಯದ ವಾತವರಣದಲ್ಲಿ ಜೀವನ ಸಾಗಿಸುವ ಆತಂಕದಲ್ಲಿದ್ದಾರೆ. ಈ ಘಟನೆಯು
ಭಾನುವಾರ ತಡರಾತ್ರಿ ಚಿಗತಾಪುರ ಗ್ರಾಮದ ವಿಜಯ್ ಎಂಬ ರೈತನಿಗೆ ಸೇರಿದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಅರ್ಧ ತಿಂದು ಕೊಂದು ಹಾಕಿತು , ಇದರಿಂದ ಸುತ್ತಲಿನ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದು,
ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ ಇದೇ ಘಟನೆಯು ಪ್ರತಿಬಾರಿ ನಡೆಯುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತವರ್ಣ ಸೃಷ್ಟಿಯಾಗಿದೆ ಇನ್ನಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಇಂತಹ ಅನಾಹುತ ತಡೆಯಲು ಮುಂದಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ :ಉಸ್ಮಾನ್ ಖಾನ್