ಕಲಬುರ್ಗಿ: ಜೇವರ್ಗಿ ತಾಲೂಕಿನ ಬಿಳವರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಿಳವರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಅಡಿಯಲ್ಲಿ 498ನೇ ಬಸವೇಶ್ವರ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಸಮತಿ ಅಧ್ಯಕ್ಷರಾದ ಜಗದೇವರಡ್ಡಿ ಉದ್ಘಾಟಿಸಿ ಮಾತನಾಡಿ ನೀರು ಬದುಕಿನ ಜೀವನಾಡಿ ಕೆರೆ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ನಾಡಿನ ಜಲ ಮೂಲಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದರಲ್ಲಿ ಯಾವುದೇ ಪ್ರತಿಫಲ ಆಪೇಕ್ಷೆ ಇಲ್ಲದೆ ಇಂತಹ ಸಮಾಜ ಮುಖಿ ಮಾಡತ್ತಿದ್ದು ,ಕಡಿಮೆ ವೆಚ್ಚದಲ್ಲಿ ಹೆಚ್ಚು ಅಭಿವೃದ್ಧಿ ಪಡಿಸಿದ ಸಂಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಾಗಿದೆ ಎಂದು ಹೇಳಿದರು. ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ಅವರು ಮಾತನಾಡುತ್ತಾ ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಗೆ ನೀರು ಬಂದಿದೆ ಇದರಿಂದ ದನಗಳು,ಆಡು, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿದೆ. ಗ್ರಾಮ ಪಂಚಾಯತ ಹಾಗೂ ಸಮಿತಿಯವರ ಉತ್ತಮ ಸಂಸ್ಕಾರದಿಂದ ಕೆರೆ ನಿರ್ಮಾಣವಾಗಿದೆ ಯೋಜನೆ ವತಿಯಿಂದ ಮಾಶಸನ, ವಾತ್ಸಲ್ಯ ಮನೆ,ಜ್ಞಾನ ದೀಪ ಶಿಕ್ಷಕರ ನೀಡುವಿಕೆ,ಶುದ್ಧ ಗಂಗಾ ಘಟಕ ,ಹಲವಾರು ಕಾರ್ಯಕ್ರಮಗಳನ್ನು ನಮ್ಮಯೋಜನೆ ಮಾಡುತ್ತದೆ ಎಂದರು. ಯೋಜನಾ ಅಧಿಕಾರಿಗಳಾದ ದಿನೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಡಿವಾಳಪ್ಪ ಪಡಶೆಟ್ಟಿ,ಲಾಯಲ್ ಪಟೇಲ್,ಹಣಮಂತರಾಯ, ಕರಿಬಸಯ್ಯಾ ಮುತ್ಯಾ, ಮೇಲ್ವಿಚಾರಕರಾದ ಶ್ಯಾಮ್, ಕೃಷಿ ಮೇಲ್ವಿಚಾರಕರಾದ ರಾಜಕುಮಾರ ರಕ್ಷಾಳ, ಸೇವಾಪ್ರತಿನಿಧಿ ಮಲ್ಲಿಕಾರ್ಜುನ, ಶಿವಪುತ್ರ, ಬಸವರಾಜ, ದೀಪಾ,ಪಾರ್ವತಿ, ಮರೆಯಮ್ಮಾ, ಬಿಳವರ ಗ್ರಾಮದ ಗ್ರಾಮಸ್ಥರು ಹಾಗೂ ಹಿರಿಯರು ಸಂಘದ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.
ವರದಿ~ರಾಜಶೇಖರ ಮಾಲಿ ಪಾಟೀಲ್ ಶಹಾಪುರ