ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ದೋಟಿಹಾಳದ ಶ್ರೀ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ,ಜಾನಪದ ಕಲಾ ಸಂಘ(ರಿ.) ಮತ್ತು ಶ್ರೀಗಾಯತ್ರಿ ಮಹಿಳಾ ಸಂಘ(ರಿ.)ದೋಟಿಹಾಳ ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು
ಸಿ.ಡಿ.ಪಿ.ಓ.ಶ್ರೀಮತಿ ಯಲ್ಲಮ್ಮ ಹಂಡಿ,
ಪಿ.ಹೆಚ್.ಸಿ.ಓ ಶ್ರೀಮತಿ ಭುವನೇಶ್ವರಿ ಬಸವರಾಜ ಬಳಿಗಾರ,
ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮೀ ಹಂದ್ರಾಳ,
ಆಶಾ ಕಾರ್ಯಕರ್ತೆ ಶ್ರೀಮತಿ ಉಷಾ ಇವರೊಂದಿಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು ನಂತರ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೋಟಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮವ್ವ ಕುಷ್ಟಗಿ ಅವರು ವಹಿಸಿದ್ದರು,ಕಾರ್ಯಕ್ರಮದ ಉದ್ಘಾಟಕರಾಗಿ ಅಂಗನವಾಡಿ ಮೇಲ್ವಿಚಾರಕಿಯರಾದ ಶ್ರೀಮತಿ ಅನ್ನಪೂರ್ಣರವರು ವಹಿಸಿಕೊಂಡಿದ್ದರು,ಈ ಕಾರ್ಯಕ್ರಮದಲ್ಲಿ ದೋಟಿಹಾಳದ ಗ್ರಾ.ಪ0.ಸದ್ಯಸರು,ಗ್ರಾಮದ ಮುಖಂಡರು,ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು-ಪದಾಧಿಕಾರಿಗಳು,
ಶ್ರೀದಯಾನಂದಪುರಿ ಕ್ರೀಡಾ ಸಾಂಸ್ಕೃತಿಕ ಜಾನಪದ ಕಲಾ ಸಂಘ ದೋಟಿಹಾಳ ಮತ್ತು ಶ್ರೀ ಗಾಯಿತ್ರಿ ಮಹಿಳಾ ಸಂಘ ದೋಟಿಹಾಳದ ಸದಸ್ಯರು,ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
-ಕರುನಾಡ ಕಂದ