ಭದ್ರಾವತಿ:ನಗರದ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ 72ನೇ ದಿನಕ್ಕೆ ಕಾಲಿಟ್ಟಿದೆ.
ಹೋರಾಟದ ಮತ್ತೊಂದು ಭಾಗವಾಗಿ ಶುಕ್ರವಾರ ಕಾರ್ಖಾನೆಯಲ್ಲಿರುವ ಶ್ರೀ ಚೌಡಮ್ಮ ದೇವಸ್ಥಾನದಲ್ಲಿ ಕಾರ್ಖಾನೆಯ ಟ್ರಾಫಿಕ್ ಇಲಾಖೆ ವತಿಯಿಂದ ಗುತ್ತಿಗೆ ಕಾರ್ಮಿಕರು, ಕಾಯಂ ಕಾರ್ಮಿಕರು ಹಾಗೂ ಅಧಿಕಾರಿಗಳಿಂದ ಗಣ ಹೋಮ ಧಾರ್ಮಿಕ ಆಚರಣೆ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ವತಿಯಿಂದ ಉಚಿತವಾಗಿ ಗಣಹೋಮ ನಡೆಸಿಕೊಡಲಾಯಿತು. ಧರ್ಮಜಾಗರಣ ಮಹಾಸಭಾ ಗೌರವಾಧ್ಯಕ್ಷರಾದ ವೇಬ್ರಹ್ಮ ಶ್ರೀ ಕೃಷ್ಣಮೂರ್ತಿ ಸೋಮಯಾಜಿ ಮತ್ತು ಎಸ್.ವಿ ರಾಮಾನುಜ ಅಯ್ಯಂಗಾರ್ ನೇತೃತ್ವದಲ್ಲಿ ಗಣಹೋಮ ಸಂಪನ್ನಗೊಂಡಿತು. ವಿ ಐ ಎಸ್ ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರು, ಖಾಯಂ ಕಾರ್ಮಿಕರು ಹಾಗೂ ಅಧಿಕಾರಿಗಳು ಗಣಹೋಮದಲ್ಲಿ ಪಾಲ್ಗೊಂಡು ಕಾರ್ಖಾನೆ ಉಳಿವಿಗಾಗಿ ಪ್ರಾರ್ಥಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ