ದಾವಣಗೆರೆ:ಹೊನ್ನಾಳಿ ತಾಲೂಕು ಉಪ ವಿಭಾಗಾಧಿಕಾರಿಯಾದ ತಿಪ್ಪಣ್ಣ ಹುಲ್ಮನಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿ
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ನೀತಿ ಸಮಿತಿ ಜಾರಿಯ ಮತ್ತು ಅದರ ನಿಯಮಗಳನ್ನು ಮಾಧ್ಯಮದವರ ಮುಂದೆ ತಿಳಿಸಿದರು ಈ ಬಾರಿ ಚುನಾವಣಾ ಆಯೋಗವು ಒಂದು ಹೊಸ ನಿಯಮವನ್ನು ತಂದಿದೆ 80 ವರ್ಷ ವಯಸ್ಸಾದವರಿಗೆ ಮನೆಯಲ್ಲೇ ಕುಳಿತು ಮತದಾನ ಮಾಡಬಹುದು ಅಂತವರನ್ನು ನಮ್ಮ ಇಲಾಖೆಯಿಂದ ಗುರುತಿಸಿ ಅವರಿಗೆ ನಮ್ಮ ಇಲಾಖೆಯಿಂದ ಒಂದು ಅರ್ಜಿಯನ್ನು ನೀಡುತ್ತೇವೆ ಅದನ್ನು ಭರ್ತಿ ಮಾಡಿ ನಮ್ಮ ಇಲಾಖೆಯವರಿಗೆ ತಲುಪಿಸಿದರೆ ಅವರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ
ಹಣಕಾಸಿನ ವ್ಯವಹಾರಗಳ ಮೇಲೆ ನಿಗಾ ಅಕ್ರಮಗಳು ನಡೆದಂತೆ ಕ್ರಮ ಹಣ ಹೆಂಡ ಹಂಚದಂತೆ ಸಾರ್ವಜನಿಕರು ಸಿಟಿಜನ್ ಎಂಬ ಹೊಸ ಆಪ್ ಮೂಲಕ ಚುನಾವಣೆಯಲ್ಲಿ ಯಾವುದೇ ಪಕ್ಷದವರು ಬಟ್ಟೆ ಉಡುಗೊರೆಯನ್ನು ಹಂಚಿದರೆ ಸಿಟಿಜನ್ ಆಪ್ ಮೂಲಕ ನಮಗೆ ದೂರು ನೀಡಿದರೆ ದೂರು ನೀಡಿದಂತವರ ಹೆಸರು ಮತ್ತು ಮೊಬೈಲ್ ನಂಬರನ್ನು ಗುಪ್ತವಾಗಿಡುತ್ತೇವೆ. ಚುನಾವಣಾ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ಮತ್ತು ಮಾಧ್ಯಮದವರು ನಮಗೆ ಸಹಕಾರ ನೀಡಬೇಕು ಎಂದು ನಮ್ಮ ವಾಹಿನಿ ಜೊತೆ ಮಾತನಾಡಿದರು.
ಪ್ರಭಾಕರ ಡಿ ಎಮ್ ಹೊನ್ನಾಳಿ ತಾಲೂಕು