ಔರಾದ : ತಾಲೂಕಿನ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಔರಾದ ತಾಲೂಕಿನ ಅಧ್ಯಕ್ಷರಾಗಿ ಸರ್ಕಾರಿ ಪ್ರೌಢ ಶಾಲೆ ಯನಗುಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ್ ಟಂಕಸಾಲೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪಟ್ಟಣದ ಜ್ಞಾನಗಂಗಾ ಶಾಲೆಯಲ್ಲಿ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ ಅವರ ನೇತೃತ್ವದಲ್ಲಿ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ ಶಿಕ್ಷಕರು ಮಲ್ಲಿಕಾರ್ಜುನ ಟಂಕಸಾಲೆ ಅವರನ್ನು ಅಧ್ಯಕ್ಷರನ್ನಾಗಿ ಹಾಗೇ ಪ್ರಶಾಂತ ಸೋಮವಂಶಿ ಅವರನ್ನು ಕಾರ್ಯದರ್ಶಿಯಾಗಿ ಜಗನ್ನಾಥ ದೇಶಮುಖ ಉಪಾಧ್ಯಕ್ಷರಾಗಿ, ಅನಿಲ ಕಟ್ಟೆ ಖಜಾಂಚಿಯಾಗಿ. ರಾಜಕುಮಾರ ಹಲ್ಮಡಗೆ ಸಹ ಕಾರ್ಯದರ್ಶಿ ಮತ್ತು ಶಿವಾಜಿರಾವ ಚಿಟಗೇರೆ ಅವರನ್ನು ಸಂಘದ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳಾದ ದೇವಿಪ್ರಸಾದ ಕಲಾಲ್, ಸಂಜುಕುಮಾರ ಸ್ವಾಮಿ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಕುಮಾರ ಸದಾಫೂಲೆ ಭಾಗವಹಿಸಿದರು ನಿವೃತ್ತ ಶಿಕ್ಷಕ ಶಿವಾಜಿರಾವ ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸಿದರು, ಸಭೆಯಲ್ಲಿ ತಾಲೂಕಿನ ಶಿಕ್ಷಕರಾದ ಶಾಮಸುಂದರ ಖಾನಾಪೂರಕರ್, ಸೂರ್ಯಕಾಂತ ಶಿಂಗೆ, ಪಂಡರಿ ಆಡೆ, ಗಜಾನನ್ ಮಳ್ಳಾ, ಸಂಗ್ರಾಮ ಪವಾರ, ಪ್ರಶಾಂತ ಪಾಟೀಲ್, ಶಿವಕುಮಾರ ನಿಟ್ಟೂರೆ, ಪಂಡರಿ ಸಾಕರೆ. ರಾಜಕುಮಾರ ನಾಯಕವಾಡೆ ಸೇರಿದಂತೆ 100ಕ್ಕೂ ಅಧಿಕ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದರು.
ಟಂಕಸಾಲೆ ಆಯ್ಕೆಗೆ : ಡಾ. ಧನರಾಜ ರಾಗಾ. ಅಮೃತರಾವ ಬಿರಾದಾರ, ಕಲ್ಯಾಣರಾವ ಶೆಂಬೆಳ್ಳೆ, ಪ್ರವೀಣ ಸ್ವಾಮಿ, ಡಿ.ಡಿ.ಬೊಳಗಾವೆ. ಸೂರ್ಯಕಾಂತ ಕಳಸೆ, ಸಂದೀಪ ಪಾಟೀಲ್. ವೀರೇಶ ಅಲ್ಮಾಜೆ. ಸಂತೋಷ ಚಾಂಡೇಸೂರೆ. ಬಾಲಾಜಿ ಸೂರ್ಯವಂಶಿ. ಬಾಲರಾಜ್ ಎಂಡೆ. ಶರಣಪ್ಪಾ ಚಿಟಮೆ, ಬಾಲಾಜಿ ಕಂಬಾರ, ರವಿ ಡೋಳೆ, ಸಾಯಿನಾಥ್ ವಾಘಮಾರೆ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.