ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಆದಿ ದೇವತೆಯರಾದ ದ್ಯಾವಮ್ಮ ದೇವಿ ಸುಂಕ್ಲಮ್ಮ ದೇವಿ ಕುಂಬೋತ್ಸವ 2012ರಲ್ಲಿ ನಡೆದಿತ್ತು. 11ವರ್ಷದ ನಂತರ ಊರಿನವರ ಅಭಿಪ್ರಾಯ ಮೇರೆಗೆ ನಡೆಯಿತು ಗುರುವಾರ ಹಾಗೂ ಶುಕ್ರವಾರ ಸಡಗರ ಸಂಭ್ರಮದಿಂದ ನೆರೆವೇರಿತು.
ಕುಂಭೋತ್ಸವದ ಅಂಗವಾಗಿ ಊರಿನ ಸುತ್ತಲೂ ದೀಪಾಲಂಕಾರ ಮಾಡಲಾಗಿತ್ತು ದೇವಸ್ಥಾನದಲ್ಲಿ ಗುರುವಾರ ರಾತ್ರಿಯಿಂದ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಗುರುವಾರ ರಾತ್ರಿಯಲ್ಲಿ ದ್ಯಾವಮ್ಮ ದೇವಿ ಗಂಗಾ ಸ್ಥಳಕ್ಕೆ ಹೋಗಿ ಗಂಗಾ ಪೂಜೆಯನ್ನು ನೆರವೇರಿಸಿ ದ್ಯಾವಮ್ಮ ದೇವಿಯ ಮೂರ್ತಿ ಮೆರವಣಿಗೆ ಮೂಲಕ ದೇವಸ್ಥಾನ ಪ್ರವೇಶ ಮಾಡಲಾಯಿತು.
ನಂತರ ಸುಮಂಗಲೆಯ ಕಳಸ ಡೊಳ್ಳು ಮಂಗಲ ವಾದ್ಯದೊಂದಿಗೆ ಉತ್ತನೂರು ಮೇಟಿ ಕುಟುಂಬದವರಿಂದ ಕುಂಭ ಮನೆಯಿಂದ ಮೆರೆವಣಿಗೆ ಮೂಲಕ ದೇವಸ್ಥಾನದ ದಾರಿ ಉದ್ದಕ್ಕೂ ಭಕ್ತರು ಜಯ ಘೋಷಗಳನ್ನು ಕೂಗುತ್ತ ಸಾಗುತ್ತದೆ ಮೇಟಿಕುಂಬ ನೋಡಲು ದೇವಸ್ಥಾನದ ಬಳಿ ಸಾವಿರಾರು ಭಕ್ತರು ಸೇರಿದ್ದರು ದೇವಸ್ಥಾನಕ್ಕೆ ಆಗಮಿಸಿ ಕುಂಭ ಪೂಜೆ ಸಲ್ಲಿಸಿದರು.
ವಿಶೇಷ ಎಂದರೆ : ಭೂತ ಪಿಲ್ಲೆ :-ದುಷ್ಟ ಶಕ್ತಿಗಳು, ಕೆಟ್ಟ ಕಾಯಿಲೆಗಳು, ಅಹಿತಕರ ಘಟನೆಗಳು ನಡೆಯದಂತೆ ಊರಿನ ಒಳಿತಿಗಾಗಿ ಭೂತ ಪಿಲ್ಲೆ ತಿರುಗುವ ವ್ಯಕ್ತಿ ಊರಿನ ಹೊಲದ ಮೇರೆಯ ಸುತ್ತ ಸರಗ ಅರುವುತ ಊರಿನ ಸುತ್ತಲೂ ಸುತ್ತುತ್ತಾನೆ.
ಬೆಳಗಿನ ಜಾವ ಊರಿನ ಎಲ್ಲಾ ಜನಾಂಗದವರು ದ್ಯಾವಮ್ಮ ದೇವಿ ಸುಂಕ್ಲಮ್ಮ ದೇವಿಗೆ ಸುಮಂಗಲಿಯರು ಕಳಸ ಕುಂಭಗಳನ್ನು ಹೊತ್ತು ಭಕ್ತಿಗೆ ಪಾತ್ರರಾಗಿ ಹರಕೆ ತೀರಿಸಿದರು. ತದನಂತರ ಪೋತಲಿಂಗೆಶ್ವರನ ಗಾವು ಬಿಡಿಸುವುದು ಕಾರ್ಯಕ್ರಮ ಜರಗಿತು.
11ವರ್ಷದಲ್ಲಿ ಒಮ್ಮೆ ನಡೆಯುವ ದೇವಿಯ ಕುಂಭೋತ್ಸವವದ ಊರ ಹಬ್ಬವನ್ನು ನೋಡಲು ತಮ್ಮ ನೆಂಟರು ಸ್ನೇಹಿತರು ಬಂಧು-ಬಳಗದವರನ್ನು ಕರೆತಂದು ಸಂತೋಷವಾಗಿ ಸಂಭ್ರಮದಿಂದ ಆಚರಿಸಿದ್ದು ಕಂಡುಬಂದಿತ್ತು.ಊರಿನ ದೇವಸ್ಥಾನಗಳ ಗೋಪುರಗಳು ಬಣ್ಣದಿಂದ ಅಲಂಕಾರದಿಂದ ಕೂಡಿದ್ದವು ರಾತ್ರಿಯಲ್ಲಿ ವಿದ್ಯುತ್ ದೀಪ ಅಲಂಕಾರಗಳನ್ನು ನೋಡಿ ಜನರು ಕಣ್ತುಂಬಿಕೊಂಡರು ಬೆಳಿಗ್ಗೆಯಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ದೂರದ ಊರಿಂದ ಬಂದಿದ್ದ ಭಕ್ತರು ದೇವಸ್ಥಾನ ಆವರಣದಲ್ಲಿ ಸೇರಿ ಭಕ್ತಿಗೆ ಪಾತ್ರರಾದರು.
ಕುಂಭೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.