ಹನೂರು ವಿಧಾನಸಭಾ ಕ್ಷೇತದ ಜೆಡಿಎಸ್ ಅಭ್ಯರ್ಥಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರ ಜೋತೆಗೂಡಿ ಕ್ಷೇತ್ರದ ಪುಣ್ಯ ಸನ್ನಿಧಿ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ..
ಕಾಡಂಚಿನ ಭಾಗ ಗೋಪಿನಾಥ ಗ್ರಾಮದಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ನಾನು ಕಳೆದ ಚುನಾವಣೆಯಲ್ಲಿ ಕೇವಲ 15 ದಿನ ಸಮಯಾವಕಾಶ ಇತ್ತು ಅದರಿಂದ ಕೆಲವು ಗ್ರಾಮಗಳಿಗೆ ಭೇಟಿ ನೀಡಲು ಸಮಯಾವಕಾಶ ಇರಲಿಲ್ಲ,
ಆದರೂ ಮತದಾರ ಬಂಧುಗಳು ನನ್ನನು ನೋಡದೆ ಕಳೆದ ಚುನಾವಣೆಯಲ್ಲಿ 45000 ಸಾವಿರ ಮತ ನೀಡಿದರು ಆದರೆ ಅಂದು ಚುನಾವಣೆಯಲ್ಲಿ ನಾನು ಪರಾಜಿತವಾದರು ನಾನು ಪಡೆದ ಮತಕ್ಕೆ ತೃಪ್ತಿ ಇದೆ,
ನನಗೆ ಮತ ನೀಡಿದ ಬಂಧುಗಳಿಗೆ ಆಸರೆಯಾಗಿ ಕ್ಷೇತ್ರದಲ್ಲಿ 5 ವರ್ಷವೂ ಪ್ರತಿ ವಾರದಲ್ಲಿ 3, 4 ದಿನ ಸಂಚಾರ ಮಾಡಿ ಬಡವರಿಗೆ ಕಷ್ಟ ಸುಖದಲ್ಲಿ ಬಾಗಿಯಾಗಿದೇನೆ ನನ್ನ ಸೇವೆ ಮತದಾರ ಬಂದುಗಳಿಗೆ ಗೊತ್ತಿದೆ.
ಹಾಗೂ ರೈತ ಬಂದು ನಮ್ಮ ವರಿಷ್ಠರು ಎಚ್ ಡಿ ಕುಮಾರಸ್ವಾಮಿ ನೀಡಿರುವ ಪಂಚರತ್ನ ಯೋಜನೆ ಬಡವರಿಗೆ ಆಸರೆಯಾಗುತ್ತದೆ ಮತ್ತು ರೈತ ಬಂಧುಗಳಿಗೆ,ಶಿಕ್ಷಣ, ವಸತಿ, ಮಹಿಳಾ ಸಬಲೀಕರಣ, ಪಂಚಾಯಿತಿ ಒಂದು ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡುವುದು ಅನೇಕ ರೈತ ಪರ ಯೋಜನೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನೇಕ ಬಡವರಪರ ಯೋಜನೆಗಳು ಜಾರಿಗೆ ಬರುತ್ತದೆ.
ಹಾಗೂ ಕ್ಷೇತ್ರದಲ್ಲಿ ನನ್ನ ಪ್ರಾಮಾಣಿಕ ಸೇವೆ ಮತದಾರ ಬಂಧುಗಳಿಗೆ ಗೊತ್ತಿದೆ,
ಒಂದು ಅವಕಾಶ ಕೊಡಿ ಇದು ಯುವಕರ ಭವಿಷ್ಯದ ಚುನಾವಣೆ ಹಾಗೂ ಕ್ಷೇತ್ರದ ಜನರು ಅಭಿವೃದ್ಧಿಯತ್ತ ಬದಲಾಗುತ್ತಾರೆ,
ಹಾಗಾಗಿ ನನಗೆ ಈ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಮತ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುತ್ತೇನೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಉಸ್ಮಾನ್ ಖಾನ್.