ಯಾದಗಿರಿ/ಶಹಾಪುರ:ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಆಯೋಜಿಸಿದ್ದು, ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಕವಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕವನಗಳು ಕಳುಹಿಸಿ ಕೊಡುವಂತೆ ಕಸಾಪ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ‘ಪ್ರಬುದ್ಧ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್’ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾ ಗಿದ್ದು, ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ಒಂದು ಸಾವಿರ ಪದಗಳು ಮೀರದಂತೆ ಬರೆದು ಡಿಟಿಪಿ ಮಾಡಿಸಿ ಮತ್ತು
ಕವಿಗಳು ತಮ್ಮ ಕವನಗಳನ್ನು ಸಹ ಡಿಟಿಪಿ ಮಾಡಿಸಿ rharanagera@gmail.com ಗೆ ಏ.10ರೊಳಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಕಸಾಪ ಗೌರವ ಕಾರ್ಯದರ್ಶಿಗಳಾದ ರಾಘವೇಂದ್ರ ಹಾರಣಗೇರಾ ಸುರೇಶಬಾಬು 3.9901559873 ಮತ್ತು .9740722431 ಹಾಗೂ ಕೋಶಾಧ್ಯಕ್ಷ ಶಂಕರ ಹುಲ್ಕಲ್ ಮೊ.9743735650 ಇವರಿಗೆ ಸಂಪರ್ಕಿಸಲು ತಿಳಿಸಿದ್ದಾರೆ. ಪ್ರಬಂಧ ಹಾಗೂ ಕವಿಗೊಷ್ಠಿಯಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಎಲ್ಲ ಕವಿಗಳ ಕವನಗಳು ಮತ್ತು ಪ್ರಬಂಧಗಳು ಒಟ್ಟುಗೂಡಿಸಿ ಕೃತಿಯ ರೂಪದಲ್ಲಿ ಹೊರತರಲಾಗುವುದು. ಕವಿಗೊಷ್ಠಿ ಕಾರ್ಯಕ್ರಮ ದಿನಾಂಕ ಕವಿಗಳಿಗೆ ನಂತರ ತಿಳಿಸಲಾಗುವುದು ಎಂದು ಹೇಳಿದ್ದಾರೆ.