Mysore breking
ಮೈಸೂರು: ಕಳೆದ ಕೆಲವು ದಿನಗಳಿಂದ ಕೃಷ್ಣ ರಾಜ ಕ್ಷೇತ್ರದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಯ ಅಭ್ಯರ್ಥಿಯಾದ ತೇಜಸ್ವಿ ನಾಗಲಿಂಗ ಸ್ವಾಮಿ ರವರ ಕುರಿತು ಹರಿದಾಡುತ್ತಿರುವ ಸುಳ್ಳು ವದಂತಿಯನ್ನು ಕುರಿತು ಪ್ರತಿಕ್ರಿಯಿಸಿದ್ದಾರೆ
ಕೃಷ್ಣ ರಾಜ ಕ್ಷೇತ್ರದ ಪ್ರಬಲ ಬಿಜೆಪಿ ಮುಖಂಡರೊಬ್ಬರು ತೇಜಸ್ವಿ ರವರಿಗೆ ಆರ್ಥಿಕ ನೆರವು ನೀಡುವ ಮೂಲಕ ಮತ ವಿಭಜನೆ ಮಾಡಿ ರಾಮದಾಸ್ ರವರನ್ನು ಸೋಲಿಸಲೆಂದು ರಣತಂತ್ರ ರೂಪಿಸಿದ್ದರೆ ಎಂದು ಸುಳ್ಳು ವದಂತಿಗಳು ಹರಿದಾಡುತ್ತಿರುವ ವಿಷಯ ಗಮನಿಸಿದ್ದೇನೆ
ಯಾವೊಬ್ಬ ಮುಖಂಡರುಗಳ ಜೊತೆ ಕೂಡ ನಾನು ಸಂಪರ್ಕದಲ್ಲಿ ಇಲ್ಲ ಯಾರೂ ಕೂಡ ನನಗೆ ಆರ್ಥಿಕ ನೆರವು ನೀಡಿ ಬೆಂಬಲಿಸುತ್ತಿಲ್ಲ
ನಾನೊಬ್ಬ ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡನಾಗಿರುವ ಕಾರಣ ಕೆಲವರು ಈ ಅಭಿಪ್ರಾಯ ಪಟ್ಟಿರ ಬಹುದು
ಕಳೆದ 6/7 ವರ್ಷಗಳಿಂದ ಕನ್ನಡ ಹೋರಾಟಗಾರನಾಗಿ ಮಾಡಿದ ಕೆಲಸಗಳಿಂದ ನನಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷದ ಮುಖಂಡರುಗಳು ಪರಿಚಿತರು ಇದನ್ನು ವರತು ಪಡಿಸಿ ಚುನಾವಣಾ ಸಂಭಂದ ಯಾವ ರೀತಿಯ ಹೊಂದಾಣಿಕೆಯ ಬೆಳವಣಿಗೆಗಳು ನಡೆದಿಲ್ಲ
ಚುನಾವಣೆ ಸಂದರ್ಭದಲ್ಲಿ ನನಗೆ ಹಿನ್ನಡೆ ಮಾಡಲೆಂದೇ ಕೆಲವರು ನನ್ನ ಮೇಲೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು
ಕೃಷ್ಣ ರಾಜ ಕ್ಷೇತ್ರದ ಮತದಾರರು ಪ್ರಜ್ಞಾವಂತ ಮತದಾರರಾಗಿದ್ದು ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ
ಕೃಷ್ಣ ರಾಜ ಕ್ಷೇತ್ರದ ಸಮಗ್ರ ಬದಲಾವಣೆಗಾಗಿ ಸದರಿ ಚುನಾವಣೆಯಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಯ ಅಭ್ಯರ್ಥಿಯಾದ ನನ್ನನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.