ಬಾಗಲಕೋಟೆ/ಇಲಕಲ್ಲ:ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ ಶಿಂಪಿಯವರ ಪುತ್ರ ಬಸವರಾಜ್ ಶಿಂಪಿ ಪ್ರಸಕ್ತ ಸಾಲಿನಲ್ಲಿ ನೆಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕಗಳಿಸಿ ಸಾಧನೆಮಾಡಿದ್ದಾನೆ ತನ್ನನ್ನು ಈ ಸಾಧನೆಗೆ ಕಾರಣರಾದ ತನ್ನ ಪಾಲಕರಿಗೂ ಹಾಗೂ ತನ್ನ ಶಾಲೆಯ ಎಲ್ಲ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿದ್ದು ಹೀಗೆ “ನಾನೊಬ್ಬ 16 ವಯಸ್ಸಿನ ಯುವಕನಾಗಿ ಹೇಳುವುದೇನೆಂದರೆ ಇನ್ನೊಂದಿಷ್ಟು ದಿನಗಳಲ್ಲಿ ಚುನಾವಣೆ ನಡೆದು ಹೊಸ ಸರಕಾರ ರಚನೆಯಾಗಲಿದೆ ಇಂತಹ ಚುನಾವಣೆಗಳಲ್ಲಿ ಒಂದು ಒಳ್ಳೆಯ ಸರಕಾರವನ್ನೋ ಅಥವಾ ಒಬ್ಬ ಒಳ್ಳೆಯ ನಾಯಕನನ್ನು ಆರಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ 18 ರಿಂದ 25 ವಯಸ್ಸಿನವರು ಮಾತ್ರ ಯುವಕರಲ್ಲ 16-17 ವಯಸ್ಸಿನವರು ಕೂಡ ಯುವಕರೇ, ಅವರಿಗೂ ಕೂಡ ವಿಚಾರ ಶಕ್ತಿಯಿದೆ, ಸಮಾಜದ ಜವಾಬ್ದಾರಿಯಿದೆ. ಇವರಿಗೂ ಕೂಡ ಮತದಾನಕ್ಕೆ ಅವಕಾಶ ನೀಡಿದರೆ ಚುನಾವಣೆಯಲ್ಲಿ ಯುವಕರ ಸಂಖ್ಯೆ ಹೆಚ್ಚಾಗುತ್ತದೆ,ಇದರಿಂದ ಒಂದು ಒಳ್ಳೆಯ ಜವಾಬ್ದಾರಿಯುತ ಹಾಗೂ ಪ್ರಜಾಪ್ರಭುತ್ವ ಸರಕಾರ ರಚನೆಯಾಗಲಿದೆ. ಆದ್ದರಿಂದ ಮುಂದಿನ ಸರಕಾರ ಹಾಗೂ ಚುನಾವಣಾ ಅಧಿಕಾರಿಗಳು 16-17 ವಯಸ್ಸಿನವರಿಗೂ ಮತದಾನಕ್ಕೆ ಅವಕಾಶ ನೀಡುವ ದಿಸೆಯಲ್ಲಿ ಆಲೋಚನೆ ನೆಡೆಸಬೇಕು”ಎಂದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.