ವಿಜಯಪುರ: ನಗರದ ಸಿಕ್ಯಾಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ 2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98 ರಷ್ಟು ಅಂಕ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ವಿಷಯಾನುಸಾರವಾಗಿ ಇಂಗ್ಲೀಷ್ 124, ಕನ್ನಡ 100, ಹಿಂದಿ 100, ಗಣಿತ 94, ವಿಜ್ಞಾನ 92, ಸಮಾಜ ವಿಜ್ಞಾನ 100 ಅಂಕಗಳನ್ನು ಪಡೆದ ತೈಯ್ಯಬಾ ಒಟ್ಟು 610 ಅಂಕಳನ್ನು ಪಡೆದಿದ್ದಾಳೆ. 98% ರಷ್ಟು ಅಂಕ ಪಡೆದ ತೈಯ್ಯಬಾ ಗೆ ಶಾಲೆಯ ಶಿಕ್ಷಕರು,ಆಡಳಿತ ಮಂಡಳಿ ಹಾಗೂ ಪೋಷಕರು ಅಭಿನಂದಿಸಿದ್ದಾರೆ.
